ಖಾಸಗಿ ಶಾಲೆಗಳಲ್ಲಿ ಶುಲ್ಕದ ಫಲಕ ಹಾಕಿ

MANAVI SALIKE
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಗಂಗಾವತಿ ಬಿಇಒ ಕಚೇರಿ ಅಧೀಕ್ಷಕಿ ರೇಣುಕಾಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಆಂಜನೇಯ, ತಾಲೂಕಾಧ್ಯಕ್ಷ ಹನುಮೇಶ ಗಾಂಧಿನಗರ, ಪದಾಧಿಕಾರಿಗಳಾದ ಕಷ್ಣನಾಯಕ, ಚಿದಾನಂದ ನಾಯಕ ಇತರರಿದ್ದರು.
Published on

ಗಂಗಾವತಿ: ಖಾಸಗಿ ಶಾಲೆಗಳಲ್ಲಿ ಸರ್ಕಾರದ ಸುತ್ತೋಲೆಯಂತೆ ಶುಲ್ಕದ ಮಾಹಿತಿ ಲಕ ಹಾಕುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ನಗರದ ಬಿಇಒ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ನಂತರ ಸಮಿತಿ ಸದಸ್ಯರು ಮತ್ತು ಪಾಲಕರು ಕಚೇರಿ ಅಧೀಕ್ಷಕಿ ರೇಣುಕಾಗೆ ಮನವಿ ಸಲ್ಲಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಆಂಜನೇಯ ಮಾತನಾಡಿ, ತಾಲೂಕಿ ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳು ಪ್ರವೇಶ ಶುಲ್ಕ ನೆಪದಲ್ಲಿ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಪಾಲಕರಿಗೆ ಹೊರೆಯಾಗುತ್ತಿದೆ.

ಪ್ರವೇಶ ಪರೀಕ್ಷೆ, ಡೊನೇಷನ್ ನೆಪದಲ್ಲಿ ಪಾಲಕರನ್ನು ಶೋಷಿಸಲಾಗುತ್ತಿದೆ. ಕೆಲ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದು, ಗುಣಮಟ್ಟದತ್ತ ಗಮನಹರಿಸುತ್ತಿಲ್ಲ. ಪಠ್ಯಪುಸ್ತಕ, ಸಮವಸಗಳ ಖರೀದಿ ನೆಪದಲ್ಲೂ ಹಣ ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಒಂದರಿಂದ 10ನೇ ತರಗತಿ ಶಾಲಾ ಶುಲ್ಕದ ವಿವರ ಹಾಕಬೇಕು. ಆದರೆ, ಕೆಲ ಶಾಲೆಗಳಲ್ಲಿ ಇದುವರೆಗೂ ಹಾಕಿಲ್ಲ, ಹಣ ವಸೂಲಿಗೆ ಅಧಿಕೃತ ರಸೀದಿ ನಿಡುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಗಂಭೀರ ಪರಿಗಣಿಸಬೇಕು ಎಂದರು.

ತಾಲೂಕಾಧ್ಯಕ್ಷ ಹನುಮೇಶ ಗಾಂಧಿನಗರ, ಪದಾಧಿಕಾರಿಗಳಾದ ಕೃಷ್ಣನಾಯಕ, ಚಿದಾನಂದ ನಾಯಕ, ಚಂದ್ರಶೇಖರ್ ಹಡಪದ, ಎಚ್. ವೀರಭದ್ರ, ಮಂಜುನಾಥ್ ಕಲ್ಗುಡಿ, ಶ್ರೀನಿವಾಸ್ ಕೊಂಡಿಕರ್, ಜಿಲಾನ್, ಮೈನುದ್ದೀನ್, ರಾಜಾಹುಸೇನ್, ಹುಲಿಗೇಶ್, ಕಬೀರ್, ಈರಪ್ಪ ಕಬ್ಬೇರ್, ವೀರೇಶ್ ನಾಯಕ್, ವಾಸು ವಿಶ್ವಕರ್ಮ, ಭಾಷಾ ಮೆಹೆಬೂಬನಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net