

ಗಂಗಾವತಿ: ಕನಕಗಿರಿ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಮತ್ತು ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ 200 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 60 ಕೋಟಿ ರೂ.ವೆಚ್ಚದ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಶ್ರೀರಾಮನಗರದಲ್ಲಿ ರಸ್ತೆ ಅಭಿವೃದ್ಧಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಲ್ಯಾಣ ಪಥ ಯೋಜನೆಯಡಿ ಶ್ರೀರಾಮನಗರದಿಂದ ಗುಂಡೂರು ವರೆಗಿನ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣಕ್ಕೆ 3.73 ಕೋಟಿ ರೂ.ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. 16 ಕೋಟಿ ರೂ.ಗಳ ವೆಚ್ಚದ ವಿವಿಧ ರಸ್ತೆಗಳ ಅಭಿವೃದ್ಧಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಹಂತಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗಳು ಮನೆ, ಮನಗಳಿಗೆ ತಲುಪಿವೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ತಹಸೀಲ್ದಾರ್ ಯು.ನಾಗರಾಜ್, ಉಪತಹಸೀಲ್ದಾರ್ ಮಹೆಬೂಬ್‌ಅಲಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಗ್ರಾಪಂ ಉಪಾಧ್ಯಕ್ಷೆ ಹುಸೇನಬೀ, ಸದಸ್ಯರಾದ ರೆಡ್ಡಿ ವೀರರಾಜು, ಮನ್ನೆ ಕೃಷ್ಣಮೂರ್ತಿ, ರಾಮಕೃಷ್ಣರಾಜು, ಪಿಡಿಒ ನಾಗೇಶ ಕುರ್ಡಿ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ, ಮುಖಂಡರಾದ ಮುಳ್ಳುಪುಡಿ ಶ್ರೀನಿವಾಸ, ಬಸವರಾಜಪ್ಪ ಸಿದ್ದಾಪುರ, ಸಾಂಬಮೂರ್ತಿ, ಜೆ.ಎನ್.ಪಾಟೀಲ್, ಮಹೆಮೂದ್‌ಖಾನ್ ಇತರರಿದ್ದರು.