ಜುಲಾಯಿ ನಗರ ಬೈಪಾಸ್ ರಸ್ತೆ ಅವ್ಯವಸ್ಥೆ: ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಆಪ್ ಕಾರ್ಯಕರ್ತರು

08082022 gangavathi app protest
Published on

ಗಂಗಾವತಿ: ರಸ್ತೆ ಅವ್ಯವಸ್ಥೆ ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜುಲಾಯಿ ನಗರ ಬೈಪಾಸ್‌ನಲ್ಲಿ ರಸ್ತೆಯ ಗುಂಡಿಗಳಿಗೆ ಪೂಜೆ ಸಲ್ಲಿಸಿ ಭಜನೆ ಮಾಡುವ ಮೂಲಕ ಸೋಮವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪಕ್ಷದ ತಾಲೂಕು ಅಧ್ಯಕ್ಷ ಶರಣಪ್ಪ ಸಜ್ಜೆ ಹೊಲ ಮಾತನಾಡಿ, ನಗರದ ರಸ್ತೆಗಳು ಹಾಳಾಗುತ್ತಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು, ನೀರು ಸಂಗ್ರಹವಾಗುತ್ತದೆ. ತಾತ್ಕಾಲಿಕ ದುರಸ್ತಿ ಕೈಗೊಳ್ಳಬೇಕಿದ್ದ ನಗರಸಭೆ ಕರ್ತವ್ಯ ಮರೆತಿದ್ದು, ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಗಮನಹರಿಸುತ್ತಿಲ್ಲ. ಅಪಘಾತಗಳ ಪ್ರಮಾಣ ಹೆಚ್ಚುತ್ತಿದ್ದು, ಜೀವ ಹಾನಿಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜನರಿಂದ ತೆರಿಗೆ ವಸೂಲಿ ಮಾಡುವ ನಗರಸಭೆ, ಮೂಲಸೌಕರ್ಯ ಒದಗಿಸುವಲ್ಲಿ ವಿಲವಾಗಿದೆಂದು ದೂರಿದರು.

ಪಕ್ಷದ ಜಿಲ್ಲಾಧ್ಯಕ್ಷ ಹುಸೇನ್‌ಸಾಬ್ ಗಂಗನಾಳ್, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗೇಶ ಮುತ್ತಾಳ್, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಮ್ಯಾಗಳಮನಿ, ಚಂದ್ರಶೇಖರ್ ನಿಸರ್ಗ, ದೊಡ್ಡಬಸಪ್ಪ, ಭೋಗೇಶ, ವಿರುಪಣ್ಣ, ಗಣೇಶ, ಚಂದ್ರು, ವಿಕ್ರಂ, ವೆಂಕಟೇಶ, ಬಾಷಾಸಾಬ್, ಗೌಸ್‌ಸಾಬ್, ಸಿದ್ದುಗೌಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net