

ಗಂಗಾವತಿ: ಶಾಂತಿ ಮತ್ತು ಸಹೋದರತ್ವವೇ ಜೀವನಕ್ಕೆ ಆಧಾರ ಎಂದು ಪ್ರಗತಿಪರ ಚಿಂತಕ ಇಲಕಲ್‌ನ ಲಾಲ್ ಹುಸೇನ್ ಕಂದ್ಗಲ್ ಹೇಳಿದರು.
ನಗರದ ಅಮರಜ್ಯೋತಿ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸೀರತ್ ಅಭಿಯಾನದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಪ್ರವಾದಿ ಮುಹಮ್ಮದ್(ಸ)ರು ಬಡವರು ಮತ್ತು ಅನಾಥರಿಗೂ ಸಹಾಯ ಮಾಡಲು ಉತ್ತೇಜಿಸಿದ್ದು, ಎಲ್ಲರೊಂದಿಗೆ ಕರುಣೆ, ದಯೆ, ಸಹಾನುಭೂತಿ ತೋರಲು ಸಂದೇಶ ನೀಡಿದರು.
ಧರ್ಮ ಬೇರೆ ಇದ್ದರೂ ಮನುಷ್ಯತ್ವ ಎಲ್ಲರಲ್ಲೂ ಒಂದೇ. ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ನ್ಯಾಯ ಪಾಲಿಸಲು ತಿಳಿಸಿದ್ದಾರೆ ಎಂದರು. ಜಮಾಅತೆ ಇಸ್ಲಾಮಿಹಿಂದ್ ತಾಲೂಕಾಧ್ಯಕ್ಷ ಅಬ್ದುಲ್ ಖುದ್ದೂಸ್, ಮಾಜಿ ಅಧ್ಯಕ್ಷ ಅಂಬರ್ ಖಾನ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಸಲೇಹಾಬೇಗಂ, ಸಿ.ಎಚ್, ನಾರಿನಾಳ್, ಸಿ.ಮಹಾಲಕ್ಷ್ಮೀ, ಶರಣಪ್ಪ ನಾಯಕ್, ಪಿ.ಲಕ್ಷ್ಮಣ ನಾಯ್ಕ, ಶಾಹೀನ್ ಕೌಸರ್, ಸುರೇಶ್ ಸಿಂಗನಾಳ್, ದಿಲೀಪ್ ಕುಮಾರ್, ಕೆ ಬಸವರಾಜ, ಡಾ. ಮುಮ್ತಾಜ್ ಬೇಗಂ, ಹುಸೇನ್ ಸಾಬ್ ತುಂಗಭದ್ರಾ, ಮುನೀರ್ ಸಾಬ್ ಇತರರಿದ್ದರು.