ಮೆಡಿಕಲ್ ವಿದ್ಯಾರ್ಥಿನಿ ಹತ್ಯೆಗೆ ಖಂಡನೆ

PROTEST
ಕೊಲ್ಕತ್ತಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಸಂಘದ ತಾಲೂಕು ಅಧ್ಯಕ್ಷೆ ಡಾ.ವೀಣಾ ಸತೀಶ, ಸಂಘದ ಪದಾಧಿಕಾರಿಗಳಾದ ಅರ್ಚನಾಅಮರೇಶ ಪಾಟೀಲ್, ಅವಿನಾಶ ಪದ್ಮಶಾಲಿ, ಶರಣಬಸವ ಹೊಸ್ಕೇರಾ, ವೈದ್ಯರಾದ ಡಾ.ಅಮರೇಶ ಪಾಟೀಲ್, ಡಾ.ಜಂಬುನಾಥಗೌಡ ಇತರರಿದ್ದರು.
Published on

ಗಂಗಾವತಿ: ಕೊಲ್ಕತ್ತಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ಸದಸ್ಯರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಐಎಂಎ ಹಾಲ್‌ನಿಂದ ಶ್ರೀಕೃಷ್ಣ ದೇವರಾಯ ವೃತ್ತದವರೆಗೆ ಮೌನ ಮೆರವಣಿಗೆಯೊಂದಿಗೆ ಆಗಮಿದ ಸಂಘದ ಸದಸ್ಯರು ಮತ್ತು ವೈದ್ಯರು, ದೀಪ ಪ್ರಜ್ವಲನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಡಾ.ವೀಣಾ ಸತೀಶ ಮಾತನಾಡಿ, ವಿದ್ಯಾರ್ಥಿನಿ ಹತ್ಯೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು, ಅತ್ಯಾಚಾರ ನಂತರ ಹತ್ಯೆ ಮಾಡಲಾಗಿದೆ. ಇಂತಹ ಪ್ರಕರಣಗಳಿಂದ ಭದ್ರತೆ ಇಲ್ಲದಿರುವುದು ಕಂಡು ಬಂದಿದ್ದು, ಭದ್ರತಾ ಕ್ರಮಗಳನ್ನು ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿ ವೈಲ್ಯ ಕಂಡು ಬಂದಿದೆ. ಕಲಿಕಾ ಕೇಂದ್ರಗಳಲ್ಲಿ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಸರ್ಕಾರ ಖಚಿತಪಡಿಸಿಕೊಳ್ಳಬೇಕಿದ್ದು, ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆವಹಿಸಬೇಕು.

ಕೆಲದಿನಗಳ ಹಿಂದೆ, ಕೇರಳದ ತಾಲೂಕು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲೂ ಯುವ ವೈದ್ಯರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಇಂತಹ ಪ್ರಕರಣಗಳ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಕಲಿಕಾ ಕೇಂದ್ರ ಮತ್ತು ಉದ್ಯೋಗ ಸ್ಥಳಗಳಲ್ಲಿ ಮಹಿಳಾ ವೈದ್ಯರ ಸುರಕ್ಷತೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಅರ್ಚನಾ ಅಮರೇಶ ಪಾಟೀಲ್, ಅವಿನಾಶ ಪದ್ಮಶಾಲಿ, ಶರಣಬಸವ ಹೊಸ್ಕೇರಾ, ವೈದ್ಯರಾದ ಡಾ.ಅಮರೇಶ ಪಾಟೀಲ್, ಡಾ.ಜಂಬುನಾಥಗೌಡ, ಡಾ.ಬಸವರಾಜ, ಡಾ.ಮಧುಸೂದನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net