ಪರಂಪರೆ-ಸಂಸ್ಕೃತಿ ಪೂರಕ ಚಟುವಟಿಕೆ ಹೆಚ್ಚಲಿ

Gangavathi quiz program
ಗಂಗಾವತಿ ಅಮರಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲೆ, ದೇಶಭಕ್ತಿ ಗಾಯನ ಮತ್ತು ಕ್ವಿಜ್ ಕಾರ್ಯಕ್ರಮವನ್ನು ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ಕೊಂಕತಿ ಕಾಳಪ್ಪಉದ್ಘಾಟಿಸಿದರು. ತಾಲೂಕು ಘಟಕದ ಅಧ್ಯಕ್ಷ ಜಂಬಣ್ಣ ಐಲಿ, ಕಾರ್ಯದರ್ಶಿ ಆನಂದ ಅಕ್ಕಿ, ಖಜಾಂಚಿ ಉಮಾ ಆರ್. ಹೇರೂರು, ಹಿರಿಯ ಸದಸ್ಯ ರಾಜಶೇಖರ್ ಹೇರೂರು ಇತರರಿದ್ದರು.
Published on

ಗಂಗಾವತಿ : ಹಾದಿ ತಪ್ಪುತ್ತಿರುವ ಯುವಕರಲ್ಲಿ ದೇಶಾಭಿಮಾನದ ಸಂಸ್ಕಾರ ನೀಡಬೇಕಿದ್ದು, ಪರಂಪರೆ ಮತ್ತು ಸಂಸ್ಕೃತಿ ಪೂರಕ ಚಟುವಟಿಕೆಗಳು ಹೆಚ್ಚಾಗಬೇಕಿದೆ ಎಂದು ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ಕೊಂಕತಿ ಕಾಳಪ್ಪ ಹೇಳಿದರು.

ನಗರದ ಅಮರಜ್ಯೋತಿ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಭಾರತ ವ್ಚಿಕಾಸ ಪರಿಷತ್ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಚಿತ್ರಕಲೆ, ದೇಶಭಕ್ತಿ ಗಾಯನ ಮತ್ತು ಕ್ವಿಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಮಾನದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಪಡೆಯುವಲ್ಲಿ ಯುವ ಸಮುದಾಯ ಹಿಂದೇಟು ಹಾಕುತ್ತಿದ್ದು, ಗುರುಹಿರಿಯರಿಗೆ ಗೌರವ ನೀಡುತ್ತಿಲ್ಲ. ರಾಷ್ಟ್ರ ಭಕ್ತಿ ಹೆಚ್ಚಿಸುವ ಕಾರ್ಯಕ್ರಮಗಳ ಜತೆಗೆ ಪರಂಪರೆ ಬಿಂಬಿಸುವ ಯೋಜನೆಗಳಿಗೆ ಉತ್ತೇಜನ ನೀಡಬೇಕಿದೆ. ದೇಶಾಭಿಮಾನ ಹೆಚ್ಚಿಸುವ ಪರಿಷತ್ ಕಾರ್ಯಕ್ರಮಗಳಿಗೆ ಜನರ ಸಹಕಾರ ಮುಖ್ಯವಾಗಿದೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಪರಿಷತ್ ಹಿರಿಯ ಸದಸ್ಯ ರಾಜಶೇಖರ್ ಹೇರೂರು, ದೇಶದಲ್ಲಿ 7ಸಾವಿರಕ್ಕೂ ಹೆಚ್ಚು ಘಟಕಗಳಿದ್ದು, ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಭಾರತಕೋ ಜಾನೋ ಕುರಿತು ಆಯೋಜಿಸಿದ್ದ ದೇಶಭಕ್ತಿ ಗೀತೆಗಳ ಗಾಯನ, ಚಿತ್ರಕಲೆ ಸ್ಪರ್ಧೆಯಲ್ಲಿ ವಿವಿಧ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಜಂಬಣ್ಣ ಐಲಿ, ಕಾರ್ಯದರ್ಶಿ ಆನಂದ ಅಕ್ಕಿ, ಖಜಾಂಚಿ ಉಮಾ ಆರ್. ಹೇರೂರು, ಪದಾಧಿಕಾರಿಗಳಾದ ಆವನಿ ಮೂಥಾ, ರಾಮಮೋಹನ್, ಯೋಗೀಶ ಮೂಥಾ, ಸಂಗೀತಾ ನೂತನಕುಮಾರ, ಗಿರಿಧರ ಜೂರಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net