ಮದ್ಯ ಅಕ್ರಮ ಮಾರಾಟ ನಿಯಂತ್ರಿಸಿ

PROTEST
ಮದ್ಯದ ಅಕ್ರಮ ಮಾರಾಟ ನಿಯಂತ್ರಿಸುವಂತೆ ಒತ್ತಾಯಿಸಿ ಕಿಷ್ಕಿಂಧಾ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಸಮಿತಿ ಕಾರ್ಯಕರ್ತರು ಗಂಗಾವತಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಅಧ್ಯಕ್ಷ ದೇವಣ್ಣ ಐಹೋಳೆ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಅಜಯಕುಮಾರ ಛಲವಾದಿ, ಎಚ್.ವಸಂತಕುಮಾರ ಕಟ್ಟಿಮನಿ, ರಾಕೇಶ ಇತರರಿದ್ದರು.
Published on

ಗಂಗಾವತಿ: ತಾಲೂಕಿನಲ್ಲಿ ಹೆಚ್ಚುತ್ತಿರುವ ಮದ್ಯದ ಅಕ್ರಮ ಮಾರಾಟ ನಿಯಂತ್ರಿಸುವಂತೆ ಒತ್ತಾಯಿಸಿ ಕಿಷ್ಕಿಂಧಾ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಸಮಿತಿ ಕಾರ್ಯಕರ್ತರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ದಲಿತ ಸಂಘಟನಾ ಸಮಿತಿ ಭೀಮಘರ್ಜನೆ ಬಣ, ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಯುವ ಗಜ ವೇದಿಕೆ ಸಹಯೋಗದಲ್ಲಿ ಹೋರಾಟ ನಡೆಸಿ ಅಬಕಾರಿ ಪಿಐಎಸೈ ಮಾರುತಿ ಮನವಿ ಸಲ್ಲಿಸಿದರು.

ವೇದಿಕೆ ಅಧ್ಯಕ್ಷ ದೇವಣ್ಣ ಐಹೋಳೆ ಮಾತನಾಡಿ, ಅಬಕಾರಿ ನಿಯಮ ಉಲ್ಲಂಸಿ ಮದ್ಯ ಮಾರಾಟವಾಗುತ್ತಿದ್ದು, ಅವಧಿ ಮೀರಿದ ಮದ್ಯದ ಮಾರಾಟ ಮಿತಿ ಮೀರಿದೆ. ಸಿಎಲ್2, ಸಿಎಲ್7 ಸನ್ನದು ಪಡೆದವರು ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡುತ್ತಿದ್ದು, ಕುಡುಕರ ಹಾವಳಿ ಹೆಚ್ಚಾಗಿದೆ. ಅಬಕಾರಿ ನಿಯಮ ಉಲ್ಲಂಸುತ್ತಿರುವ ಕೆಲ ಹೋಟೆಲ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲದಂತಾಗಿದೆ. ಅಕ್ರಮ ಮಾರಾಟ ನಿಲ್ಲಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವಿವಿಧ ಸಂಘಟನೆ ಪದಾಧಿಕಾರಿಗಳಾದ ಅಜಯಕುಮಾರ ಛಲವಾದಿ, ಎಚ್.ವಸಂತಕುಮಾರ ಕಟ್ಟಿಮನಿ, ರಾಕೇಶ, ಸುರೇಶ ಮಾಳಿಮನಿ, ಡಿ.ರಮೇಶ ಭೋವಿ, ಜಂಬಣ್ಣ, ಬೆಟ್ಟಪ್ಪ ಆರಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net