

ಗಂಗಾವತಿ: ನಗರದ ಹಿರೇಜಂತಕಲ್‌ನಲ್ಲಿ ಪಂಚಮಸಾಲಿ ಸಮಾಜದಿಂದ ಭಾನುವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಪೂರ್ಣಕುಂಭ, ಜಾನಪದ ಕಲೆ ಹಾಗೂ ವಾದ್ಯಗಳು ಗಮನಸೆಳೆದವು. ಮಾಜಿ ಶಾಸಕ ಪರಣ್ಣಮುನವಳ್ಳಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಬ್ರಿಟಿಷರ್‌ಗೆ ಸಿಂಹಸ್ವಪ್ನವಾಗಿದ್ದ ಚನ್ನಮ್ಮ, ಸ್ವಾತಂತ್ರೃ ಸಂಗ್ರಾಮದ ಮೊದಲ ಹೋರಾಟಗಾರ್ತಿ ಎಂದರು.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಶಿವಪ್ಪ ಯಲಬುರ್ಗಿ, ಪದಾಧಿಕಾರಿಗಳಾದ ಮುಕ್ಕಣ್ಣ ಕತ್ತಿ, ರವಿಯಲಬುರ್ತಿ, ಮರ್ದಾನಪ್ಪ, ಬಸನಗೌಡ, ಜಡಿಯಪ್ಪ, ಹನಮಂತಪ್ಪ ತಳುವಗೇರಿ, ನಿಂಗಪ್ಪ, ಭೀಮಣ್ಣ ರೊಟ್ಟಿ, ಜಗದೀಶಪ್ಪ ಬೀಳಗಿ, ನಾಗರಾಜ ಬರಗೂರ, ಎ.ಕೆ.ಮಹೇಶ್, ಮಂಜುನಾಥ ಹೊಸ್ಕೇರಿ, ವಿನಯ್ ಕುಮಾರ್, ಬಸವರಾಜ ಕೋರಿ ಇತರರಿದ್ದರು.