ಎಲ್ಲರ ಒಗ್ಗೂಡಿಕೆಗಾಗಿ ಸಂಕೀರ್ತನೆ ಯಾತ್ರೆ

Sankirtan Yatra
ಶ್ರಾವಣ ಮಾಸದ ನಿಮಿತ್ತ ಸರ್ವ ಸಮಾಜದ ಭಜನೆ ಕಾರ್ಯಕ್ರಮ ಗಂಗಾವತಿಯಲ್ಲಿ ಗುರುವಾರ ಜರುಗಿತು. ಮಾಜಿ ಶಾಸಕ ಎಚ್.ಎಸ್.ಮುರಳೀಧರ, ಹಿಂದು ಜಾಗರಣೆ ವೇದಿಕೆ ಪ್ರಾಂತ ಸಂಚಾಲಕ ವಿನಯ್‌ಪಾಟೀಲ್, ಮುಖಂಡರಾದ ಸುಬ್ರಮಣ್ಯ ರಾಯ್ಕರ್, ವಿಠ್ಠಲ ನಾವಡೆ ಇತರರಿದ್ದರು.
Published on

ಗಂಗಾವತಿ: ಹಿಂದುಪರ ಸಂಘಟನೆಗಳಿಂದ ಶ್ರಾವಣ ಮಾಸದ ನಿಮಿತ್ತ ನಗರ ಸಂಕೀರ್ತನ ಕಾರ್ಯಕ್ರಮದಡಿ ನಗರದಲ್ಲಿ ಸರ್ವ ಸಮಾಜದ ಭಜನೆ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಚನ್ನಮಲ್ಲಿಕಾರ್ಜುನ ದೇವಾಲಯದಿಂದ ಸಂಕೀರ್ತನೆ ಯಾತ್ರೆ ಆರಂಭಿಸಿ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ನಗರದಾದ್ಯಂತ ಭಜನೆ ತಂಡ ಸಂಚರಿಸಿದ ಬಳಿಕ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕೃ ದೇವಾಲಯದಲ್ಲಿ ಸಮಾರೋಪಗೊಂಡಿತ್ತು.

ಹಿಂದು ಜಾಗರಣೆ ವೇದಿಕೆ ಪ್ರಾಂತ ಸಂಚಾಲಕ ವಿನಯ್‌ಪಾಟೀಲ್ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಎಲ್ಲ ಸಮುದಾಯದ ಭಜನಾ ತಂಡವನ್ನು ಒಗ್ಗೂಡಿಸಲಾಗುತ್ತಿದ್ದು, ಧಾರ್ಮಿಕ ಮತ್ತು ಅಧ್ಯಾತ್ಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಂಕೀರ್ತನೆ ಯಾತ್ರೆ ಉದ್ದೇಶ ಮತ್ತು ಧರ್ಮ ಕುರಿತು ವಕೀಲ ನಾಗರಾಜ್ ಗುತ್ತೇದಾರ್ ಉಪನ್ಯಾಸ ನೀಡಿದರು.

ಮಾಜಿ ಶಾಸಕ ಎಚ್.ಎಸ್.ಮುರಳೀಧರ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ವಿವಿಧ ಸಂಘಟನೆ ಮುಖಂಡರಾದ ಸುಬ್ರಮಣ್ಯ ರಾಯ್ಕರ್, ವಿಠ್ಠಲ ನಾವಡೆ, ಶ್ರವಣಕುಮಾರ ರಾಯ್ಕರ್, ಸದಾನಂದ ಶೇಟ್, ಅಶೋಕ ರಾಯ್ಕರ್, ರಘುನಾಥ ಪವಾರ್, ಗೋಪಾಲ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net