2500 ವರ್ಷಗಳ ಕನ್ನಡ ಭಾಷೆ ಮುನ್ನೆಲೆಗೆ ಬರಲಿ

14092022 gangavathi JDS protest
Published on

ಗಂಗಾವತಿ: ಹಿಂದಿ ದಿವಸ ಆಚರಣೆ ವಿರೋಧಿಸಿ ಜೆಡಿಎಸ್ ತಾಲೂಕು ಘಟಕದ ಸದಸ್ಯರು ನಗರದ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಅನಂತ ಜೋಶಿಗೆ ಮನವಿ ಸಲ್ಲಿಸಿದರು.

ನೇತೃತ್ವವಹಿಸಿದ್ದ ನಗರಸಭೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಶೇಖ್ ನಬೀಸಾಬ್ ಮಾತನಾಡಿ, ಹಿಂದಿ ದಿವಸ್ ಆಚರಣೆ ಮೂಲಕ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಹಿಂದಿ ದಿವಸ್ ಆಚರಣೆಗೆ ಅವಕಾಶ ನೀಡಬಾರದು. 400 ವರ್ಷದ ಇತಿಹಾಸವಿರುವ ಹಿಂದಿಗೆ ಮಾನ್ಯತೆ ನೀಡುವ ಕೇಂದ್ರ ಸರ್ಕಾರಕ್ಕೆ , 2500 ವರ್ಷಗಳ ಇತಿಹಾಸವಿರುವ ಕನ್ನಡ ನೆನಪಿಗೆ ಬರಲಿಲ್ಲವೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕನ್ನಡದೊಂದಿಗೆ ಕೊಂಬಣಿ, ತುಳು, ಕೊಡವ ಸೇರಿ ಹತ್ತಾರು ಭಾಷೆಗಳಿದ್ದು, ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಹಿಂದಿ ದಿವಸ್ ಆಚರಣೆಗೆ ಮಹತ್ವ ನೀಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಹಿಂದಿ ದಿವಸ್ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಮಹ್ಮದ್ ಯೂಸ್ೂ, ಎಸ್.ಎ. ತಾರೀಖ್ ಪಟೇಲ್, ಶೇಖರಪ್ಪ, ಕೆ.ಕೊಟ್ರೇಶ, ನಗರ ಮತ್ತು ಗ್ರಾಮೀಣ ಘಟಕದ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net