ಅಂಗವಿಕಲ ಸ್ನೇಹಿ ವಾತಾವರಣ ನಿರ್ಮಿಸಿ

Gangavathi Bharat Yatre
ಗಂಗಾವತಿ ತಾಪಂ ಆವರಣದಲ್ಲಿ ಏರ್ಪಡಿಸಿದ್ದ ಭಾರತ ಸುಗಮ್ಯ ಯಾತ್ರೆಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಚಾಲನೆ ನೀಡಿದರು. ಎಂಆರ್‌ಡಬ್ಲುೃ ಮಂಜುಳಾ ಪುರಾಣಿಕಮಠ, ವಿಆರ್‌ಡಬ್ಲುೃಗಳಾದ ಬಸವರಾಜ ಗೋನಾಳ್, ಶಮೀಬೇಗಂ ಇತರರಿದ್ದರು.
Published on

ಗಂಗಾವತಿ: ಸರ್ಕಾರಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಅಂಗವಿಕಲರಿಗಾಗಿ ಸುಗಮ ರೀತಿಯಲ್ಲಿ ಸಂಚರಿಸುವ ವ್ಯವಸ್ಥೆ ಕಲ್ಪಿಸಿ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.

ನಗರದ ತಾಪಂ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಭಾರತ ಸುಗಮ್ಯ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಓಡಾಡಲು ಅಂಗವಿಕಲರಿಗೆ ಅಡೆ-ತಡೆ ರಹಿತ ವಾತಾವರಣ ನಿರ್ಮಿಸುವ ಉದ್ದೇಶವಿದೆ. ಅವರಿಗೆ ಸಾರ್ವಜನಿಕ ಕಟ್ಟಡಗಳು, ಮನರಂಜನೆ ಸ್ಥಳ, ಪಾರ್ಕ್, ಗ್ರಂಥಾಲಯ, ಮಾರುಕಟ್ಟೆ, ಪ್ರವಾಸಿ ತಾಣಗಳು, ಸಾರ್ವಜನಿಕ ಶೌಚಗೃಹಗಳಲ್ಲಿ ಸೌಲಭ್ಯಗಳಿರಬೇಕು. ಸಾರ್ವಜನಿಕ ಕಟ್ಟಡಗಳು ಅಂಗವಿಕಲ ಸ್ನೇಹಿಯಾಗಿರಲಿ ಎಂಬುವ ಉದ್ದೇಶದಿಂದ ವಿಶ್ವ ಸುಲಭ ಲಭ್ಯತಾ ಅರಿವು ಜಾಥಾ ಸಂಚರಿಸಲಿದೆ ಎಂದರು.

ವಿಆರ್‌ಡಬ್ಲುೃ, ಎಂಆರ್‌ಡಬ್ಲುೃ ಮತ್ತು ಯುಆರ್‌ಡಬ್ಲುೃಗಳು ನಗರ ಮತ್ತು ಗ್ರಾಮೀಣದಾದ್ಯಂತ ಸಂಚರಿಸಿ, ಅಂಗವಿಕಲರಿಗೆ ಬೇಕಿರುವ ಸೌಲಭ್ಯಗಳನ್ನು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಿದರು.

ವಿಆರ್‌ಡಬ್ಲುೃಗಳಾದ ಯಮನಮ್ಮ, ವೀರಣ್ಣ, ಭೀಮೇಶ, ತಾಪಂ ವಿಷಯನಿರ್ವಾಹಕರಾದ ರಾಘವೇಂದ್ರ ಸಂತೋಷ, ಸುಮಂಗಲಾ, ರಂಗಮ್ಮ, ಶರಣಪ್ಪ, ಭೀಮರಾವ್, ಶಿವಕುಮಾರ, ಸಂತೋಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net