ಅಹಿತಕರ ಘಟನೆಗಳಿಗೆ ಅವಕಾಶ ನೀಡಿದಿರ

sanapur itbp force
ಸಣಾಪುರದಲ್ಲಿ ಐಟಿಬಿಪಿ ಯೋಧರಿಂದ ಹಮ್ಮಿಕೊಂಡಿದ್ದ ಜಾಗೃತಿ ಪಥಸಂಚಲನದಲ್ಲಿ ಗ್ರಾಮೀಣ ಪಿಐ ಎನ್.ಮಂಜುನಾಥ ಶುಕ್ರವಾರ ಮಾತನಾಡಿದರು. ಪಿಡಿಒ ಬಸವರಾಜಗೌಡ, ಅಂಜನಾದ್ರಿ ಬೆಟ್ಟ ದೇವಾಲಯದ ವ್ಯವಸ್ಥಾಪಕ ಎಂ.ವೆಂಕಟೇಶ ಇತರರಿದ್ದರು.
Published on

ಗಂಗಾವತಿ: ದೇಶ ಕಾಯುವ ಯೋಧ ಮತ್ತು ಮತದಾರ ಶ್ರೇಷ್ಠರಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಗ್ರಾಮೀಣ ಪಿಐ ಎನ್.ಮಂಜುನಾಥ ಹೇಳಿದರು.

ಸಣಾಪುರದಲ್ಲಿ ಐಟಿಬಿಪಿ ಯೋಧರಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಪಥಸಂಚಲನದಲ್ಲಿ ಮಾತನಾಡಿದರು. ಶಾಂತಿಯುತ ಚುನಾವಣೆಗಾಗಿ ದೇಶ ಕಾಯುವ 700 ಯೋಧರು ಜಿಲ್ಲೆಗೆ ಬಂದಿದ್ದು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ರಾಜಕೀಯ ಪ್ರೇರಿತ ಗಲಭೆ ಮತ್ತು ಗೊಂದಲಗಳಿಗೆ ಅವಕಾಶ ನೀಡದೆ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾನಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ನಿಗಾವಹಿಸಲಾಗುತ್ತಿದ್ದು, ಪ್ರಕರಣ ದಾಖಲಿಸಲಾಗುವುದು ಎಂದರು.

ಯೋಧರು ಗ್ರಾಮ ಪ್ರವೇಸಿಸುತ್ತಿದ್ದಂತೆ ಗ್ರಾಮಸ್ಥರು ಪುಷ್ಪಾರ್ಪಣೆಯೊಂದಿಗೆ ಸ್ವಾಗತಿಸಿದರು. ಇದಕ್ಕೂ ಮೊದಲು ಸಂಗಾಪುರ, ಆನೆಗೊಂದಿ, ಹನುಮನಹಳ್ಳಿ, ಅಂಜನಾದ್ರಿ ಬೆಟ್ಟದ ಬಳಿಯೂ ಪಥಸಂಚಲನ ನಡೆಸಲಾಯಿತು. ಪಿಡಿಒಗಳಾದ ಕೃಷ್ಣಪ್ಪ, ಬಸವರಾಜಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net