ಹಾನಿಕಾರಕ ವಸ್ತುಗಳ ವಶಕ್ಕೆ ಪಡೆದ ಅಧಿಕಾರಿಗಳು

Gangavati Harumful Thing Seize
ಗಂಗಾವತಿ ಗುಂಡಮ್ಮ ಕ್ಯಾಂಪ್ ಮಂಡಾಳು ಭಟ್ಟಿ ಏರಿಯಾಕ್ಕೆ ನಗರಸಭೆ ಆಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಪರಿಸರ ಮಾಲೀನ್ಯಕ್ಕೆ ಕಾರಣವಾಗುವ ಹಾನಿಕಾರಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
Published on

ಗಂಗಾವತಿ: ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ನಗರದ ಗುಂಡಮ್ಮ ಕ್ಯಾಂಪ್ ಮಂಡಾಳು ಭಟ್ಟಿ ಏರಿಯಾಕ್ಕೆ ನಗರಸಭೆ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಹಾನಿಕಾರಕ ವಸ್ತುಗಳನ್ನು ವಶಪಡಿಸಿಕೊಂಡಿತು.

ಮಂಡಾಳು ಭಟ್ಟಿ ಘಟಕದಲ್ಲಿ ಟೈರ್, ಚಪ್ಪಲಿ ಸೇರಿ ಪ್ಲ್ಯಾಸ್ಟಿಕ್ ವಸ್ತುಗಳನ್ನು ಸುಡಲಾಗುತ್ತಿದ್ದು, ಜನವಸತಿ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ. ಕೆಲವರು ದೂರು ನೀಡಿರುವ ಹಿನ್ನೆಲೆಯಲ್ಲಿ ಪೌರಾಯುಕ್ತ ಅರವಿಂದ ಜಮಖಂಡಿ ನೇತೃತ್ವದ ನೈರ್ಮಲೀಕರಣ ವಿಭಾಗದ ಅಧಿಕಾರಿಗಳ ತಂಡ ದಾಳಿ ನಡೆಸಿ, ಟೈರ್, ಸುಟ್ಟು ಕರಕಲಾದ ತಂತಿ ಮತ್ತು ರಸ್ತೆಯ ಮೇಲೆ ಒಣಗಲು ಹಾಕಿದ್ದ ಮಂಡಾಳಿಗೆ ಬಳಸುವ ಅಕ್ಕಿಯನ್ನು ವಶಪಡಿಸಿಕೊಂಡರು. ಮಹೆಬೂಬ್, ಾಹೀಮ್, ಚಾಂದಬೀ, ಮೈಬೂ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಿಸಲು ಸಿಬ್ಬಂದಿ ಸೂಚಿಸಲಾಯಿತು.

ದಾಳಿ ನಡೆಸಿದ ಸಂದರ್ಭದಲ್ಲಿ ಮಂಡಾಳು ತಯಾರು ಮಾಡುತ್ತಿದ್ದು, ಸ್ವಚ್ಛತೆಯಿರಲಿಲ್ಲ. ಆರೋಗ್ಯದ ಮೇಲೆ ಪರಿಣಾಮ ಬೀರುವ ವಸ್ತುಗಳನ್ನು ಹಾಕಿದ್ದಕ್ಕೆ ಮಾಲೀಕರನ್ನು ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಗಮನ ಬೇರೆಡೆ ಸೆಳೆಯಲು ಕೆಲವರು ಚರಂಡಿ, ಸಾರ್ವಜನಿಕ ಶೌಚಘೃಹ ಸ್ವಚ್ಛತೆಯಿಲ್ಲದ ಬಗ್ಗೆ ಗದ್ದಲ ನಡೆಸಲು ಮುಂದಾದರು. ಪ್ರಕರಣ ದಾಖಲಿಸುವ ಸೂಚನೆ ನೀಡುತ್ತಿದ್ದಂತೆ ಕಾಲ್ಕಿತ್ತರು. ಜನವಸತಿ ಪ್ರದೇಶದಲ್ಲಿನ ಮಂಡಾಳು ಭಟ್ಟಿಯನ್ನು ಶರಣಬಸವೇಶ್ವರ ಕ್ಯಾಂಪ್‌ಗೆ ಸ್ಥಳಾಂತರಿಸಲು ನಿರ್ಣಯಿಸಲಾಯಿತು.

ಗಡುವು: ನಗರದ ನೀಲಕಂಠೇಶ್ವರ ವೃತ್ತದಿಂದ ಹೊಸಳ್ಳಿ ರಸ್ತೆವರಿಗೆ ುಟ್‌ಪಾತ್ ಮತ್ತು ಚರಂಡಿ ಅತಿಕ್ರಮಿಸಿದ ಅಂಗಡಿಗಳ ತೆರವಿಗೆ 2 ದಿನ ಗಡವು ನೀಡಲಾಯಿತು. ಈ ಹಿಂದೆ ಸಂಸದರ ಅನುದಾನದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದು, ುಟ್‌ಪಾತ್ ನಿರ್ಮಾಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಉದ್ದೇಶಿತ ಸ್ಥಳದಲ್ಲಿ ಅಂಗಡಿಗಳನ್ನಿಟ್ಟಿದ್ದರಿಂದ ಪಾದಚಾರಿಗಳಿಗೆ ತೊಂದರೆಯಾಗಿತ್ತು. ಎಲ್ಲ ಅಂಗಡಿಗಳನ್ನು ತೆರವಿಗೆ ನೈರ್ಮಲೀಕರಣ ಸಿಬ್ಬಂದಿಗೆ ಸೂಚಿಸಲಾಯಿತು. ಆರೋಗ್ಯ ನಿರೀಕ್ಷಕರಾದ ಎ.ನಾಗರಾಜ, ದತ್ತಾತ್ರೇಯ ಹೆಗಡೆ, ನೈರ್ಮಲ್ಯ ನಿರೀಕ್ಷಕ ಸ್ವಾತಿ ಹೇಮಂತ ಇತರರಿದ್ದರು.

ಪರಿಸರ ಮಾಲಿನ್ಯಕ್ಕೆ ಕಾರಣವಾದ ಮಂಡಾಳು ಭಟ್ಟಿ ಮೇಲೆ ಹಲವು ದೂರುಗಳು ಬಂದಿದ್ದು, ಹಾನಿಕಾರಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ುಟ್‌ಪಾತ್ ಅತಿಕ್ರಮಿತ ಅಂಗಡಿಗಳ ತೆರವಿಗೆ 2 ದಿನದ ಗಡುವು ನೀಡಲಾಗಿದೆ.
| ಅರವಿಂದ ಜಮಖಂಡಿ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net