ಬಂದೋಬಸ್ತ್‌ಗೆ 1300 ಪೊಲೀಸರ ನಿಯೋಜನೆ

HANUMA MALE
ಎಸ್ಪಿ ಮಗ್‌ಶಾಟ್ ಬಳಸಿ.
Published on

ಗಂಗಾವತಿ: ಹನುಮಮಾಲೆ ವಿಸರ್ಜನಾ ಕಾರ್ಯಕ್ರಮ ಬಂದೋಬಸ್ತ್‌ಗಾಗಿ 1300 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಹೇಳಿದರು.

ನಗರದ ಡಿವೈಎಸ್ಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನಗರದ ಪ್ರದೇಶದಲ್ಲಿ 11, ಗ್ರಾಮೀಣ ಭಾಗದಲ್ಲಿ 9 ಚೆಕ್‌ಪೋಸ್ಟ್ ವ್ಯವಸ್ಥೆಯಿದ್ದು, ಡ್ರೋನ್ ಕ್ಯಾಮರಾ ಬಳಕೆ ಜತೆಗೆ 171 ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. 3 ಹೆಚ್ಚುವರಿ ಎಸ್ಪಿ, 10 ಡಿವೈಎಸ್ಪಿ, 30 ಪಿಎಸೈ, 5 ಕೆಎಸ್‌ಆರ್‌ಪಿ, 10 ಡಿಆರ್ ಸಿಬ್ಬಂದಿಯೊಂದಿಗೆ 1300 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ವಾಹನಗಳ ಪಾರ್ಕಿಂಗ್‌ಗೆ 22 ಜಾಗ ಗುರುತಿಸಲಾಗಿದೆ. ಬೆಂಗಳೂರು, ಉತ್ತರ ಕರ್ನಾಟಕದಿಂದ ಬರುವ ಭಕ್ತರು ಕೊಪ್ಪಳ ಹೈವೇ, ಬುಕ್ಕಸಾಗರ ಮೂಲಕ ಅಂಜನಾದ್ರಿಗೆ ಬರಬೇಕು. ಅದರಂತೆ ಕಕ ಭಾಗದ ಭಕ್ತರು ಗಂಗಾವತಿ ಮೂಲಕ ಹೋಗಲು ಅವಕಾಶ ನೀಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದ್ದು, ಪಾರ್ಕಿಂಗ್‌ಗಾಗಿ ಭಕ್ತರಿಗೆ ಲೊಕೇಷನ್ ನೀಡಲಾಗುವುದು.

ನಗರದಲ್ಲಿ ಜರುಗಲಿರುವ ಸಂಕೀರ್ತನೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಮಾಹಿತಿ ಪಡೆಯುತ್ತಿದ್ದು, ಅಂದಾಜು 8ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಪಿಐಗಳಾದ ಪ್ರಕಾಶ ಮಾಳೆ, ಸೋಮಶೇಖರ್ ಜುತ್ತಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net