ಹಾಲ್‌ಟಿಕೆಟ್ ಪಡೆಯಲು ಮುಗಿಬಿದ್ದ ಪದವಿ ವಿದ್ಯಾರ್ಥಿಗಳು !

27082022 gvt skng college
Published on

ಗಂಗಾವತಿ: ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೆಮಿಸ್ಟರ್ ಪರೀಕ್ಷೆಗಳ ಪ್ರವೇಶ ಪತ್ರ ವಿತರಿಸುವಲ್ಲಿ ಗೊಂದಲವಾಗಿದ್ದು, ಸಿನಿಮಾ ಟಿಕೆಟ್ ಪಡೆಯುವ ರೀತಿಯಲ್ಲಿ ವಿದ್ಯಾರ್ಥಿಗಳು ಮುಗಿಬಿದ್ದಿದ್ದು ಶೂಕ್ರವಾರ ಕಂಡುಬಂತು.

ಶ್ರೀಕೃಷ್ಣ ದೇವರಾಯ ವಿವಿ ವ್ಯಾಪ್ತಿಯಲ್ಲಿ 4 ಮತ್ತು 6 ಸೆಮಿಸ್ಟರ್ ಪರೀಕ್ಷೆಗಳು ಆ.29ರಿಂದ ಆರಂಭವಾಗಲಿದ್ದು, ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಲಾವಿಭಾಗ ಒಂದರಲ್ಲೇ 900 ವಿದ್ಯಾರ್ಥಿಗಳಿದ್ದಾರೆ. ಸಿಬ್ಬಂದಿ ಕೊರತೆಯಿಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಕೊಠಡಿಯ ಕಿಟಕಿ ಮೂಲಕ ವಿತರಿಸುವ ವ್ಯವಸ್ಥೆ ಮಾಡಿದ್ದರಿಂದ ನೂಕುನುಗ್ಗಲು ಉಂಟಾಯಿತು. ಗಂಟೆಗಟ್ಟಲೆ ಕಾದಿದ್ದರಿಂದ ವಿದ್ಯಾರ್ಥಿಗಳು, ಕಾಲೇಜು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರಾಚಾರ್ಯ ಡಾ.ಎನ್.ಜಿ.ಹೆಬ್ಸೂರ್ ಪ್ರತಿಕ್ರಿಯಿಸಿ, ಕಲಾವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿರುವುದರಿಂದ ಕಿಟಕಿ ಮೂಲಕ ವಿತರಿಸುವ ವ್ಯವಸ್ಥೆ ಮಾಡಿದ್ದು, ಯಾರಿಗೂ ತೊಂದರೆಯಾಗಿಲ್ಲ. ಉಳಿದ ವಿಭಾಗದ ವಿದ್ಯಾರ್ಥಿಗಳಿಗೆ ಅಯಾ ಮುಖ್ಯಸ್ಥರ ಮೂಲಕ ಕೊಠಡಿಯಲ್ಲಿ ವಿತರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net