

ಗಂಗಾವತಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂಎಲ್) ಜಿಲ್ಲಾ ಸಮಿತಿ ಮಂಗಳವಾರ ನಗರದ ತಾಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿತು.
ರಾಜ್ಯ ಸ್ಥಾಯಿ ಸಮಿತಿ ಸದಸ್ಯ ಜೆ.ಭಾರದ್ವಾಜ ಮಾತನಾಡಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದ್ದು, ದೈನಂದಿನ ಬಳಕೆ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಹೇರುವ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಿಲಿಂಡರ್ ದರ 50 ರೂ. ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯಲಾಗಿದೆ. ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಕೇಂದ್ರ ಸರ್ಕಾರ, ಬಡವರಿಗೆ ಹೊರೆಯಾಗುವಂತಹ ಯೋಜನೆ ರೂಪಿಸುತ್ತಿದೆ ಎಂದು ಆರೊಪಿಸಿದರು. ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿದರು.ಪದಾಧಿಕಾರಿಗಳಾದ ವಸೀಮ್, ಪಾಮಣ್ಣ ಅರಳಿಗನೂರು, ರಮೇಶ, ಸೋಮು, ರಾಜಾ, ಖಾದರ್, ಮಾಯಮ್ಮ, ಹುಲಿಗೆಮ್ಮ, ಪಾರ್ವತಮ್ಮ, ಹನುಮಮ್ಮ ಇತರರಿದ್ದರು.