ಸಂದೇಶಗಳಿಂದ ಸಂತೃಪ್ತ ಜೀವನ

Untitled design (5)
ಗಂಗಾವತಿ ದೇವಾಂಗ ಮಠದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಸಂದರ್ಭ ಸಮಾಜದ ಸಂ.ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಕೊಳಗದ್, ಮುಖಂಡರಾದ ವಸಂತಗೌಡ ಕೊಪ್ಪರದ, ಶಂಕ್ರಪ್ಪ ವಸದ ಇತರರಿದ್ದರು.
Published on

ಗಂಗಾವತಿ: ನಗರದ ದೇವಾಂಗ ಮಠದಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವ ಶನಿವಾರ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ದೇವಾಂಗ ಸಮಾಜದ ಸಂ.ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ ಮಾತನಾಡಿ, ದಾರ್ಶನಿಕರ ಸಂದೇಶಗಳು ಸರ್ವಕಾಲಿಕ ಮಾನ್ಯತೆ ಪಡೆದಿವೆ. ಸಂತೃಪ್ತ ಜೀವನಕ್ಕಾಗಿ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಕೊಳಗದ್, ಮುಖಂಡರಾದ ವಸಂತಗೌಡ ಕೊಪ್ಪರದ, ಶಂಕ್ರಪ್ಪ ವಸ್ತ್ರದ, ವಿದ್ಯಾಧರ ಕೊಳಗದ, ಆನಂದ ಮುಕ್ತಿ, ಮಲ್ಲಿಕಾರ್ಜುನ ಕಡೂರು,ಮೋಹನ್ ಹುಲ್ಮನಿ, ಮಲ್ಲಿಕಾರ್ಜುನ ಮೂರಂಕಣ, ಶ್ರೀನಿವಾಸ ಗುಂಟಾಪುರ, ಮಲ್ಲಿಕಾರ್ಜುನ ತೂನಾ, ಉದಯ ಕಿರಗಿ, ಗುರು ಅರಳಿಕಟ್ಟೆ ಇತರರಿದ್ದರು.

ನಗರದ ತಾಲೂಕಾಡಳಿತ ಸೌಧದಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿದರು. ಕಂದಾಯ ನಿರೀಕ್ಷಕ ಮಹೇಶ ದಲಾಲ್, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಶ್ರೀಕಂಠೇಶ,ನಾಗರತ್ನ, ಮುರ್ತುಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net