ಸಮಸ್ಯೆಗಳಿದ್ದಲ್ಲಿ ಸಮಿತಿ ಗಮನಕ್ಕೆ ತನ್ನಿ

Gangavathi Taskforse meeting
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಸಗೊಬ್ಬರ ವಿತರಕರ ಸಭೆಯಲ್ಲಿ ರಸಗೊಬ್ಬರ ನಿರ್ವರ್ಹಣಾ ಟಾಸ್ಕ್ ೆರ್ಸ್ ಸಮಿತಿ ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ ಶುಕ್ರವಾರ ಮಾತನಾಡಿದರು. ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಪ್ರಭಾರ ತಹಸೀಲ್ದಾರ್ ರವಿ ಎಸ್. ಅಂಗಡಿ, ತಾಪಂ ಇಒ ರಾಮರೆಡ್ಡಿ ಪಾಟೀಲ್ ಇತರರಿದ್ದರು.
Published on

ಗಂಗಾವತಿ: ಮುಂಗಾರು ಹಂಗಾಮಿನ ಕೃಷಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ರೈತರಿಗೆ ವಿತರಿಸಬೇಕಿದ್ದು, ನಿರ್ಲಕ್ಷ್ಯವಹಿಸುವಂತಿಲ್ಲ ಎಂದು ರಸಗೊಬ್ಬರ ನಿರ್ವರ್ಹಣಾ ಟಾಸ್ಕ್ ಪೋರ್ಸ್ ಸಮಿತಿ ನೋಡಲ್ ಅಧಿಕಾರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ತಾಲೂಕು ಮಟ್ಟದ ರಸಗೊಬ್ಬರ ನಿರ್ವಹಣಾ ಟಾಸ್‌‌ಕೆೆರ್ಸ್ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಸಗೊಬ್ಬರ ವಿತರಕರ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಸನ್ನಿವೇಶ ಗಮನದಲ್ಲಿಟ್ಟುಕೊಂಡು ವಿತರಕರು ರೈತರಿಗೆ ನೆರವಾಗಬೇಕಿದ್ದು, ಯಾವೊಬ್ಬ ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆವಹಿಸಬೇಕು. ಸಮಸ್ಯೆಗಳಿದ್ದಲ್ಲಿ ಸಮಿತಿ ಗಮನಕ್ಕೆ ತರಬೇಕಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪರಿಹರಿಸಲಾಗುವುದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಮಾತನಾಡಿ, ಮಾರುಕಟ್ಟೆಯಲ್ಲಿ ಸಾಕಷ್ಟು ಕಾಂಪ್ಲೆಕ್ಸ್ ರಸಗೊಬ್ಬರದ ದಾಸ್ತಾನಿದ್ದು, ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರ ರೈತರು ಬಳಸಬೇಕು. ರೈತರ ಬೇಡಿಕೆಯಂತೆ ದಾಸ್ತಾನಿದ್ದು, ಕೊರರೆಯಿಲ್ಲ ಎಂದರು.

ಪ್ರಭಾರ ತಹಸೀಲ್ದಾರ್ ರವಿ ಎಸ್. ಅಂಗಡಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಪ್ರಕಾಶ, ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಕುಮಾರ ಪಾಟೀಲ್ ಬಿರಾದಾರ್, ಉಪ ತಹಸೀಲ್ದಾರರಾದ ರೆಹಮಾನ್, ಮಹಿಬೂಬ್ ಅಲಿ, ಶಿರಸ್ತೇದಾರ್ ಎನ್.ರವಿ, ಆರ್‌ಐಗಳಾದ ಮಹೇಶ ದಲಾಲ್, ಸೈಯದ್ ಬಷೀರುದ್ದೀನ್ ಹುಸೇನಿ, ಹಾಲೇಶ್, ಕಷಿ ಅಧಿಕಾರಿಗಳಾದ ಪ್ರಕಾಶ, ಹರೀಶ್, ಅಶೋಕ, ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಸೇರಿ ರಸಗೊಬ್ಬರ ವಿತರಕರು ಮತ್ತು ಕಷಿ ಪರಿಕರ ಮಾರಾಟಗಾರರಿದ್ದರು.

ದಾಖಲೆ ಪರಿಶೀಲನೆ: ನಗರದ ವಿವಿಧ ರಸಗೊಬ್ಬರ ವಿತರಕರ ಮಾರಾಟ ಮಳಿಗೆಗೆ ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ ನೇತೃತ್ವದ ಅಧಿಕಾರಿಗಳು ಭೇಟಿ ನೀಡಿ ದಾಸ್ತಾನು ಮತ್ತು ವಹಿವಾಟು ರೀತಿ ಪರಿಶೀಲಿಸಿದರು. ರಸಗೊಬ್ಬರ ಸರಬರಾಜು ಇನ್‌ವಾಯ್ಸ, ರೈತರಿಗೆ ವಿತರಿಸಿದ ಬಿಲ್‌ಗಳು, ದಾಸ್ತಾನು ಪುಸ್ತಕ ಇತರ ದಾಖಲಾತಿಗಳ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net