ಮದುವೆ-ಶೈಕ್ಷಣಿಕ ಸಹಾಯಧನ ನೀಡಿ

Gangavathi labours protest
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ೆಡರೇಷನ್ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ತಾಲೂಕಾಧ್ಯಕ್ಷ ಮುತ್ತಣ್ಣ, ಕಾರ್ಯದರ್ಶಿ ಮಂಜುನಾಥ ಡಗ್ಗಿ, ಪದಾಧಿಕಾರಿಗಳಾದ ಮಹಾದೇವ ಗೌಳಿ, ರಮೇಶ ಬೂದಗುಂಪ, ಮಹೇಶ, ಶಂಕರ ಸಂಗಾಪುರ ಇತರರಿದ್ದರು.
Published on

ಗಂಗಾವತಿ: ಕಾರ್ಮಿಕ ವರ್ಗಕ್ಕೆ ದೊರೆಯಬೇಕಾದ ಶೈಕ್ಷಣಿಕ ಸಹಾಯಧನ ಇತರ ಬೇಡಿಕೆಗಳ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ೆಡರೇಷನ್ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಕಾರ್ಮಿಕ ನಿರೀಕ್ಷಕ ಗೋಪಾಲ್ ದೂಪಧ್‌ಗೆ ಮನವಿ ಸಲ್ಲಿಸಿದರು.

ೆಡರೇಷನ್ ತಾಲೂಕು ಕಾರ್ಯದಶಿ ಮಂಜುನಾಥ ಡಗ್ಗಿ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನುಬದ್ಧವಾಗಿ ದೊರೆಯುವ ಸೌಲಭ್ಯಗಳು ಮರೀಚಿಕೆ ಯಾಗಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಶೈಕ್ಷಣಿಕ, ಮದುವೆ ಸಹಾಯಧನ ನಿಲ್ಲಿಸಲಾಗಿದ್ದು, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ವರ್ಷದಿಂದ ವಿಲೇವಾರಿಯಾಗಿಲ್ಲ. ಶೈಕ್ಷಣಿಕ ಸಹಾಯಧನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಬೇಕಿದ್ದು, ನೋಂದಣಿ ಮತ್ತು ಮರುನೋಂದಣಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಬೇಕು. ಪಿಂಚಣಿ ಅರ್ಜಿಗಳ ವಿಲೇವಾರಿ, ಕಾರ್ಮಿಕ ಇಲಾಖೆ ತಂತ್ರಾಂಶ ದೋಷ ಸರಿಪಡಿಸುವುದು ಸೇರಿ ಕಾರ್ಮಿಕರಿಗೆ ಮೀಸಲಾದ ಕಿಟ್‌ಗಳನ್ನು ವಿತರಿಸುವಂತೆ ಒತ್ತಾಯಿಸಿದರು.

ತಾಲೂಕಾಧ್ಯಕ್ಷ ಮುತ್ತಣ್ಣ, ಪದಾಧಿಕಾರಿಗಳಾದ ಮಹಾದೇವ ಗೌಳಿ, ರಮೇಶ ಬೂದಗುಂಪ, ಮಹೇಶ, ಶಂಕರ ಸಂಗಾಪುರ, ಚೈತ್ರಕುಮಾರ, ಮುತ್ತಣ್ಣ ದಾಸನಾಳ, ಲಿಂಗಪ್ಪ ಕೊಜ್ಜಿ, ತಿಪ್ಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net