ಗ್ರಾಮೀಣರ ಆರೋಗ್ಯ ರಕ್ಷಣೆಗೆ ಒತ್ತು

eye check up free camp
ಗಂಗಾವತಿ ತಾಲೂಕಿನ ಕೇಸರಹಟ್ಟಿಯ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಕಣ್ಣು ತಪಾಸಣೆ ಉಚಿತ ಶಿಬಿರವನ್ನು ಜನ ಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಮುದೇಗೌಡ ಮಾ.ಪಾಟೀಲ್ ಶನಿವಾರ ಉದ್ಘಾಟಿಸಿದರು. ಮುಖಂಡರಾದ ಶೇಖರಗೌಡ ಮಾಲಿ ಪಾಟೀಲ್, ವೀರಪ್ಪ ರೆಡ್ಡಿ, ಅಮರಯ್ಯ ಸ್ವಾಮಿ, ಮಾಲತೇಶ ಮಾಲಿ ಪಾಟೀಲ್, ವೈದ್ಯೆ ಎಸ್.ರಾಶಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಕೇಸರಹಟ್ಟಿಯ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಹೇರೂರು ವಲಯ ಮತ್ತು ಮಾರುತಿ ಇನ್ಸ್‌ಟಿಟ್ಯೂಟ್ ಆ್ ಪ್ಯಾರಾಮೆಡಿಕಲ್ ಸೈನ್ಸ್ ಸಹಯೋಗದಲ್ಲಿ ಕಣ್ಣು ತಪಾಸಣೆ ಉಚಿತ ಶಿಬಿರ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿ, ಶಸ ಚಿಕಿತ್ಸೆಗೆ ಸಲಹೆ ನೀಡಲಾಯಿತು.

ಶಿಬಿರ ಉದ್ಘಾಟಿಸಿದ ಜನ ಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಮುದೇಗೌಡ ಮಾ.ಪಾಟೀಲ್ ಮಾತನಾಡಿ, ಆರ್ಥಿಕ ವ್ಯವಸ್ಥೆ ಸುಧಾರಣೆ ಜತೆಗೆ ಆರೋಗ್ಯ ಸಮಸ್ಯೆಗಳಿಗೂ ಟ್ರಸ್ಟ್ ಪರಿಹಾರ ನೀಡುತ್ತಿದ್ದು, ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿದೆ. ಆರೋಗ್ಯ ಉಚಿತ ಶಿಬಿರದ ಮೂಲಕ ಗ್ರಾಮೀಣರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿದೆ ಎಂದರು.

ಟ್ರಸ್ಟ್ ಯೋಜನೆ, ಸಮಾಜಮುಖಿ ಚಟುವಟಿಕೆಗಳ ಬಗ್ಗೆ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಮಾಹಿತಿ ನೀಡಿದರು. ಮುಖಂಡರಾದ ಶೇಖರಗೌಡ ಮಾಲಿ ಪಾಟೀಲ್, ವೀರಪ್ಪ ರೆಡ್ಡಿ, ಅಮರಯ್ಯ ಸ್ವಾಮಿ, ಮಾಲತೇಶ ಮಾಲಿ ಪಾಟೀಲ್, ವೈದ್ಯೆ ಎಸ್. ರಾಶಿ, ವಲಯ ಮೇಲ್ವಿಚಾರಕ ಮಂಜುನಾಥ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ಸೇವಾಪ್ರತಿನಿಧಿ ಲತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net