ಪ್ರತಿ ತಿಂಗಳು ನೀರಿನ ಪರೀಕ್ಷೆ ಕಡ್ಡಾಯ

Gangavathi water check
ಶ್ರೀರಾಮನಗರದ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಘಟಕವನ್ನು ತಾಪಂ ಇಒ ರಾಮರೆಡ್ಡಿ ಪಾಟೀಲ್ ಶುಕ್ರವಾರ ಪರಿಶೀಲಿಸಿದರು. ಗ್ರಾಪಂ ಪಿಡಿಒ ನಾಗೇಶ ಕುರಡಿ, ಆರ್‌ಡಬ್ಲ್ಯುಎಸ್ ಎಇ ನಾಗರಾಜ, ಜೆಇ ಸತೀಶ ಕುಮಾರ್ ಇತರರಿದ್ದರು.
Published on

ಗಂಗಾವತಿ: ಶುದ್ಧೀಕರಣದ ನಂತರ ನೀರು ಪೂರೈಸಿ. ನೀರಿನ ಪರೀಕ್ಷೆ ಕಡ್ಡಾಯವಾಗಿ ನಡೆಯಬೇಕಿದೆ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.

ತಾಲೂಕಿನ ಶ್ರೀರಾಮನಗರದ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಕುಡಿವ ನೀರಿನ ಘಟಕದ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೀರು ಶುದ್ಧೀಕರಣದ ಬಗ್ಗೆ ಖಚಿತಪಡಿಸಿಕೊಳ್ಳಬೇಕಿದ್ದು, ನಿಗದಿತ ಅವಧಿಯೊಳಗೆ ವಿವಿಧ ವಾರ್ಡ್‌ಗಳಿಗೆ ನೀರು ಪೂರೈಕೆಯಾಗಬೇಕು. ಪ್ರತಿ ತಿಂಗಳು ನೀರಿನ ಪರೀಕ್ಷೆ ಕಡ್ಡಾಯ. ಗ್ರಾಮದ 5ನೇ ವಾರ್ಡ್ ನಲ್ಲಿ ನಿರ್ಮಿಸಿರುವ 2 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಎರಡು ವರ್ಷಗಳಾಗಿದೆ. ಘಟಕದಿಂದ ಜನರಿಗೆ ನೀರು ಪೂರೈಸಲು ಕ್ರಮವಹಿಸಿ ಎಂದು ಆರ್‌ಡಬ್ಲುೃಎಸ್ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಕೆರೆ ಕಾಮಗಾರಿ ವೀಕ್ಷಣೆ

ತಾಲೂಕಿನ ಹೊಸಕೇರಾ ಗ್ರಾಪಂ ವ್ಯಾಪ್ತಿಯ ಕೋಟಯ್ಯ ಕ್ಯಾಂಪ್ ಕುಡಿವ ನೀರಿನ ಕೆರೆಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಭೇಟಿ ನೀಡಿ ೆನ್ಸಿಂಗ್ ಕಾಮಗಾರಿ ವೀಕ್ಷಿಸಿದರು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ವಹಣೆ ಸಿಬ್ಬಂದಿಗೆ ಸೂಚಿಸಿದರು. ಗ್ರಾಪಂ ಪಿಡಿಒ ನಾಗೇಶ ಕುರಡಿ, ಆರ್‌ಡಬ್ಲ್ಯುಎಸ್ ಎಇ ನಾಗರಾಜ, ಜೆಇ ಸತೀಶ ಕುಮಾರ್, ಹೊಸಕೇರಾ ಗ್ರಾಪಂ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net