ವಾಸ್ತುಶಿಲ್ಪಕ್ಕೆ ಅತ್ಯದ್ಭುತ ಕೊಡುಗೆ

Gangavati Establishment of Vijayanagara Empire
ಗಂಗಾವತಿ ಸಂಕಲ್ಪ ಪದವಿ ಕಾಲೇಜಿನಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ನಿಮಿತ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಶಾಸಿ ಅವರನ್ನು ಸನ್ಮಾನಿಸಲಾಯಿತು. ಪರಿಷದ್ ತಾಲೂಕಾಧ್ಯಕ್ಷ ಜಡೆಪ್ಪ ಮೆಟ್ರಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ನಾಗರಾಜ್ ಎಸ್.ಗುತ್ತೇದಾರ್, ಪ್ರಾಂತ ಕಾರ್ಯಕಾರಿ ಮಂಡಳಿ ಸದಸ್ಯ ಅಶೋಕ ರಾಯ್ಕರ್ ಇತರರಿದ್ದರು.
Published on

ಗಂಗಾವತಿ: ವಾಸ್ತುಶಿಲ್ಪಕ್ಕೆ ವಿಜಯನಗರ ಸಾಮ್ರಾಜ್ಯದ ಕೊಡುಗೆ ಸಾಕಷ್ಟಿದೆ ಎಂದು ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಶಾಸಿ ಹೇಳಿದರು.

ನಗರದ ಸಂಕಲ್ಪ ಪದವಿ ಕಾಲೇಜಿನಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ನಿಮಿತ್ತ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯ ಜಗತ್ತು ಕಂಡ ಅತ್ಯಂತ ವೈಭವದ ಹಾಗೂ ಮರೆಯಲಾಗದ ರಾಜಮನೆತನ. ಧರ್ಮ ಸಮನ್ವಯತೆ, ಕಲೆ, ಸಾಹಿತ್ಯ, ಸಂಗೀತ, ವಿಶೇಷವಾಗಿ ವಾಸ್ತುಶಿಲ್ಪಕ್ಕೆ ಅತ್ಯದ್ಭುತ ಕೊಡುಗೆ ನೀಡಿದೆ. ಹಂಪಿ ಭಾಗದಲ್ಲಿರುವ ವಾಸ್ತು ಶಿಲ್ಪಗಳೇ ಇದಕ್ಕೆ ಸಾಕ್ಷಿ. ಪರಂಪರೆ ಮತ್ತು ಇತಿಹಾಸವನ್ನು ವಿದ್ಯಾರ್ಥಿಗಳು ಅರಿತುಕೊಂಡು ಸಾಮಾಜಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಪರಿಷದ್ ತಾಲೂಕು ಸಮಿತಿ ಅಧ್ಯಕ್ಷ ಜಡೆಪ್ಪ ಮೆಟ್ರಿ ಮಾತನಾಡಿ, ಆನೆಗೊಂದಿ ವಿಜಯನಗರದ ಮೊದಲ ರಾಜಧಾನಿಯಾಗಿದೆ. ನಂತರದಲ್ಲಿ ಹಂಪಿಗೆ ಸ್ಥಳಾಂತರವಾಯಿತು. ಹಂಪಿಗೆ ಸಿಕ್ಕ ಮಾನ್ಯತೆ ಆನೆಗೊಂದಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ನಾಗರಾಜ್ ಎಸ್. ಗುತ್ತೇದಾರ್ ಮಾತನಾಡಿದರು. ಪ್ರಾಂತ ಕಾರ್ಯಕಾರಿ ಮಂಡಳಿ ಸದಸ್ಯರಾದ ಅಶೋಕ ರಾಯ್ಕರ್, ಡಾ.ನಾರಾಯಣ ಕಂಗದಲ್, ಯಂಕಪ್ಪ ಕಟ್ಟಿಮನಿ,ಕ್ಯಾ.ಶಿವನಗೌಡ ತೆಗ್ಗಿ, ರಾಜೇಶ ನಾಯಕ, ಹರನಾಯಕ, ಉಪನ್ಯಾಸಕರಾದ ಸೌಮ್ಯ, ತಾರಾ ಸಂತೋಷ ಮೆಹರ್‌ವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net