

ಗಂಗಾವತಿ: ನಗರದ ಆನೆಗೊಂದಿ ರಸ್ತೆಯ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಉರಗ ರಕ್ಷಕ ಚನ್ನಬಸವ ರಕ್ಷಿಸಿದ್ದು, ದೇವಘಾಟ ಬಳಿ ತುಂಗಭದ್ರಾ ನದಿ ಬಿಡಲಾಯಿತು.
ಆನೆಗೊಂದಿ ರಸ್ತೆ ಎಚ್‌ಆರ್‌ಎಸ್‌ಎಂ ಪದವಿ ಕಾಲೇಜು ಮುಂಭಾಗದ ಶೆಡ್ ಬಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಥಳೀಯರು ಉರಗ ರಕ್ಷಕ ಚನ್ನಬಸ ಅವರಿಗೆ ಮಾಹಿತಿ ನೀಡಿದ್ದಾರೆ. 5 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ನದಿಗೆ ಬಿಡಲಾಯಿತು.
ಕಾಲೇಜು ಮುಂಭಾಗದಲ್ಲಿ ಶ್ರೀರಾಮಲಿಂಗೇಶ್ವರ ಬಡಾವಣೆಯಿದ್ದು, ಬೆಟ್ಟ ಮತ್ತು ತುಂಗಭದ್ರಾ ವಿತರಣೆ ಕಾಲುವೆಗೆ ಹೊಂದಿಕೊಂಡಿದೆ. ಹೆಬ್ಬಾವು ಸಿಕ್ಕ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಆಗಮಿಸಿ ಮಾಹಿತಿ ಪಡೆದುಕೊಂಡರು. ಅರಣ್ಯ ರಕ್ಷಕ ಶಿವಕುಮಾರ, ಸ್ಥಳೀಯರಾದ ಮಂಜುನಾಥ ಕಟ್ಟಿಮನಿ, ಬಸವರಾಜ ಮಾನಳ್ಳಿ, ವಿನಯ್ ಪಾಟೀಲ್, ಶಶಿಧರ ಉಪ್ಪಾರ್ ಇತರರಿದ್ದರು.