ವಿದ್ಯುತ್ ದೀಪ ಅಳವಡಿಸಲು ಒತ್ತಾಯ

protest
ಗಂಗಾವತಿ ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್‌ಗೆ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ, ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ್, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನದಾಸರ್, ಹಾಲಪ್ಪ ಇತರರಿದ್ದರು.
Published on

ಗಂಗಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಒತ್ತಾಯಿಸಿ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರಸಭೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕು ಸಮಿತಿ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಅಧ್ಯಕ್ಷೆ ಹೀರಾಬಾಯಿ ಸಿಂಗ್‌ಗೆ ಸಲ್ಲಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ನಗರದ ಪ್ರಮುಖ ವೃತ್ತಗಳನ್ನು ಸಂಪರ್ಕಿಸುವ ರಸ್ತೆಯಲ್ಲಿನ ಎಲ್ಲ ವಿದ್ಯುತ್ ದೀಪದ ಕಂಬಗಳನ್ನು ತೆರವುಗೊಳಿಸಿದ್ದು, ಹೊಸ ಯೋಜನೆ ನನೆಗುದಿಗೆ ಬಿದ್ದಿದೆ.

ಇದರಿಂದ ನಗರ ಕತ್ತಲಮಯವಾಗಿದ್ದು, ರಾತ್ರಿ ವೇಳೆ ಸಂಚರಿಸುವುದು ದುಸ್ತರವಾಗಿದೆ. ಹೊಸ ಯೋಜನೆಯಡಿ ರೂಪಿಸಿರುವ ವಿನ್ಯಾಸದ ಬಗ್ಗೆಯೂ ಸಾರ್ವಜನಿಕರ ಆಕ್ಷೇಪವಿದ್ದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿನ್ಯಾಸ ಬೇಡ. ಸೌಹಾರ್ದತೆಯ ಹೆಚ್ಚಿಸುವ ದೀಪಗಳಿಗೆ ಆದ್ಯತೆ ನೀಡಬೇಕಿದ್ದು, ಗೊಂದಲಕ್ಕೆ ಅವಕಾಶನೀಡದಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net