ಶೈಕ್ಷಣಿಕ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಆಗ್ರಹ

080922 Gangavati SFI Protest
ಗಂಗಾವತಿಯಲ್ಲಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮಂಜುನಾಥ ನಂದನ್‌ಗೆ ಮನವಿ ಸಲ್ಲಿಸಿದರು.
Published on

ಗಂಗಾವತಿ: ಶೈಕ್ಷಣಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ವಿವಿಧ ಶಾಲೆ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜುನಾಥ ನಂದನ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೋಮುವಾದಕ್ಕೆ ಕುಮ್ಮಕ್ಕು ನೀಡುತ್ತಿದೆ. ಸಕಾಲಕ್ಕೆ ಪಠ್ಯಪುಸ್ತಕ, ಸೈಕಲ್, ಸಮವಸ, ವಿದ್ಯಾರ್ಥಿವೇತನ ಮತ್ತು ಬಸ್‌ಪಾಸ್ ವಿತರಣೆಯಲ್ಲಿ ವಿಲವಾಗಿದ್ದು, ಇದರಿಂದ ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಸಿಬ್ಬಂದಿ ಕೊರತೆ ನೀಗಿಸುವಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ವಿಲೀನಕರಣ ನೀತಿ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದು, ಇದರಿಂದ ಖಾಸಗಿ ಶಾಲೆಗಳ ದರ್ಬಾರ ಹೆಚ್ಚಾಗಲಿದೆ. ಪಠ್ಯಪುಸ್ತಕಗಳಲ್ಲಿ ಬಲವಂತವಾಗಿ ಕೋಮುವಾದ ವಿಷಯಗಳನ್ನು ತುಂಬಲಾಗುತ್ತಿದೆ. ಶೈಕ್ಷಣಿಕ ಸಮಸ್ಯೆ ಪರಿಹಾರದ ಜತೆಗೆ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಯು.ನಾಗರಾಜ್, ಹನುಮಂತ, ಸೋಮನಾಥ, ಶರ್ೀ, ಶಂಕರ್, ಬಸಯ್ಯ, ಸಲ್ಮಾ, ದುರುಗಮ್ಮ, ರಾಜಸಾಬ್, ಶಿವಮ್ಮ, ರೇಣುಕಾ, ಶ್ರೀದೇವಿ, ಮಾಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net