ಡಾ.ಪುನೀತ್ ಸಮಾಜ ಸೇವೆ ಸ್ಮರಣೀಯ

18 gvt 04
Published on

ಗಂಗಾವತಿ: ಅತಿ ಚಿಕ್ಕ ವಯಸ್ಸಿನಲ್ಲಿ ಅಗಾಧ ಸಾಧನೆ ಮಾಡಿದ ನಟ ಡಾ.ಪುನೀತ್ ರಾಜಕುಮಾರ್ ಸಮಾಜ ಸೇವೆ ಅವಿಸ್ಮರಣೀಯ ಎಂದು ಪಿರಾಮಿಡ್ ಧ್ಯಾನ ಸಂಸ್ಥೆ ಮುಖ್ಯಸ್ಥ ಡಾ.ಬಸವ ಗುರೂಜಿ ಹೇಳಿದರು.

ಶ್ರೀರಾಮನಗರದ ಡಾ.ಪುನೀತ್ ವೃತ್ತದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಪುನೀತ್ ರಾಜಕುಮಾರ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಪ್ರಗತಿಪರ ರೈತ ಅನ್ನೆ ಶೇಖರ, ಜಿ.ರಾಮಕೃಷ್ಣ, ಲಿಂಗರಾಜು ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು. ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಗಾಯಕ ಅರ್ಜುನ ಇಟಗಿಯಿಂದ ಗಾಯನ ನಡೆಯಿತು. ಎಪಿಎಂಸಿ ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ, ಮುಖಂಡರಾದ ಜಿ.ಹರಿಬಾಬು, ಮೈಲಾರಿರಾವ್ ಇತರರಿದ್ದರು.

ಹಿರೇಜಂತಕಲ್: ನಗರದ ಹಿರೇಜಂತಕಲ್‌ನ ೈವ್ ಬ್ರದರ್ಸ್‌ ಹೋಟೆಲ್‌ನಲ್ಲಿ ದಿ.ಪುನೀತರಾಜ್‌ಕುಮಾರ ಜನ್ಮದಿನೋತ್ಸವ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ ಬಡ ಜನರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮುಖಂಡ ಉಮೇಶ ಸೇರಿ ವಾರ್ಡ್ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net