ಡಾ.ಅಂಬೇಡ್ಕರ್ ಮೂರ್ತಿ ಅನಾವರಣಕ್ಕೆ ಭಿನ್ನರಾಗ

250123 Gangavati TP Meeting
ಗಂಗಾವತಿ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜಿ ಸಂಧಾನ ಸಭೆಯಲ್ಲಿ ಎರಡು ಗುಂಪಿನ ನಡುವೆ ವಾಗ್ವಾದ ನಡೆಯಿತು.
Published on

ಗಂಗಾವತಿ: ನಗರದ ಅಂಬೇಡ್ಕರ್ ವೃತ್ತದಲ್ಲಿನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣಕ್ಕೆ ದಲಿತ ಪರ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸರ್ಕಲ್ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ನಗರದಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗಾಗಿ 1997ರಿಂದ ದಲಿತಪರ ಸಂಘಟನೆಗಳು ಹೋರಾಟ ನಡೆಸಿದ್ದು, 25 ವರ್ಷಗಳ ನಂತರ ಕಾಲ ಕೂಡಿಬಂದಿತ್ತು. 15ಲಕ್ಷ ರೂ. ವೆಚ್ಚದಲ್ಲಿ ಕಂಚಿನ ಮೂರ್ತಿ ಪ್ರತಿಷ್ಠಾಪಿಸಿದ್ದರೂ ಅನಾವರಣಗೊಂಡಿರಲಿಲ್ಲ. ಜ.26ಕ್ಕೆ ಮೂರ್ತಿ ಅನಾವರಣಕ್ಕೆ ದಲಿತಪರ ಕೆಲ ಸಂಘಟನೆಗಳು ನಿರ್ಧರಿಸಿದ್ದವು. ಅಂಬೇಡ್ಕರ್ ವೃತ್ತದ ಬಳಿಯ ಮಾಜಿ ಉಪ ಪ್ರಧಾನಿ ಜಗಜೀವನರಾಮ್ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ದಿನದಂದೇ ಅಂಬೇಡ್ಕರ್ ಮೂರ್ತಿ ಅನಾವರಣ ಮಾಡಬೇಕು ಎಂದು ಒಂದು ಗುಂಪಿನ ಮುಖಂಡರು ಒತ್ತಾಯಿಸಿದರು. ಇದನ್ನು ಇನ್ನೊಂದು ಗುಂಪಿನ ಸದಸ್ಯರು ವಿರೋಧಿಸಿದ್ದು, ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಎರಡೂ ಸಂಘಟನೆಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ವಿವಾದ ತಾರಕಕ್ಕೇರಿದೆ. ಜ.26ಕ್ಕೆ ಮೂರ್ತಿ ಅನಾವರಣಗೊಳಿಸುತ್ತೇವೆ ಎಂದು ಕೆಲವರು ಸಂದೇಶ ರವಾನಿಸಿದ್ದರಿಂದ ತಾಲೂಕಾಡಳಿತ ಎಚ್ಚೆತ್ತುಕೊಂಡಿದೆ. ಮೂರ್ತಿ ಸುತ್ತಲೂ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವೃತ್ತದ ಸುತ್ತಲೂ ಜಿಲ್ಲಾ ಸಶಸ ಪಡೆಯನ್ನು ನಿಯೋಜಿಸಲಾಗಿದೆ.

ರಾಜಿ ಸಂಧಾನ: ವಿವಾದ ಇತ್ಯರ್ಥಕ್ಕೆ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ತಾಲೂಕಾಡಳಿತದಿಂದ ತಾಪಂ ಮಂಥನ ಸಭಾಂಗಣದಲ್ಲಿ ಸೋಮವಾರ ರಾಜಿ ಸಂಧಾನ ಸಭೆ ನಡೆಯಿತು. ಸಂವಿಧಾನ ಸಮರ್ಪಣೆ ದಿನವೇ ಮೂರ್ತಿ ಅನಾವರಣಗೊಳಿಸುವಂತೆ ದಲಿತಪರ ಸಂಘಟನೆ ಮುಖಂಡ ಕುಂಟೋಜಿ ಮರಿಯಪ್ಪ ಬೆಂಬಲಿಗರು ಒತ್ತಾಯಿಸಿದರು. ಜಗಜೀವನರಾಮ್ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಎರಡನ್ನೂ ಅನಾವರಣಗೊಳಿಸುವಂತೆ ದಲಿತ ಪರ ಸಂಘಟನೆ ಇನ್ನೊಂದು ಗುಂಪಿನ ಮುಖಂಡ ಯು.ಲಕ್ಷ್ಮಣ ಬೆಂಬಲಿಗರು ಪಟ್ಟು ಹಿಡಿದರು. ಎರಡೂ ಗುಂಪಿನ ನಡುವೆ ವಾಗ್ವಾದ ನಡೆಯಿತು. ವೇದಿಕೆಯತ್ತ ನುಗ್ಗಿದ ಎರಡೂ ಗುಂಪಿನವರು ಅಸಮಾಧಾನ ವ್ಯಕ್ತಪಡಿಸಿದರು. ಅಭಿಪ್ರಾಯ ಸಂಗ್ರಹಿಸಿದ ಅಧಿಕಾರಿಗಳು ಒಮ್ಮತ ನಿರ್ಧಾರಕ್ಕೆ ಬಂದಿದ್ದು, ೆ.15ರಂದು ಎರಡೂ ಮೂರ್ತಿಗಳನ್ನು ಅನಾವರಣಗೊಳಿಸಲು ಒಪ್ಪಿಸಿದರು.

ತಹಸೀಲ್ದಾರ್ ಯು.ನಾಗರಾಜ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ, ಗ್ರಾಮೀಣ ಪಿಐ ಎನ್.ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ರಾಠೋಡ, ನಗರಸಭೆ ಸದಸ್ಯರಾದ ನವೀನ್ ಮಾಲಿ ಪಾಟೀಲ್, ಎ್.ರಾಘವೇಂದ್ರ, ಸೋಮನಾಥ ಭಂಡಾರಿ, ಮಾಜಿ ಸದಸ್ಯರಾದ ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ಹುಸೇನಪ್ಪ ಹಂಚಿನಾಳ್, ನಯೋಪ್ರಾ ಸದಸ್ಯ ಶಿವಪ್ಪ ಮಾದಿಗ, ವಿವಿದ ಸಂಘಟನೆ ಮುಖಂಡರಾದ ನಾಗರಾಜ್ ನಂದಾಪುರ, ಬಿ.ಸಂಜೀವಪ್ಪ, ಬಸವರಾಜ ಛಲವಾದಿ, ದೊಡ್ಡಭೋಜಪ್ಪ, ದುರುಗೇಶ ದೊಡ್ಮನಿ, ಹಂಪೇಶ ಹರಿಗೋಲು, ಸಿ.ಕೆ.ಮರಿಸ್ವಾಮಿ ಬರಗೂರು, ಹನುಮಂತ ಮುಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net