ಗಂಗಾವತಿಯಲ್ಲಿ ಜಿಲ್ಲಾ ವಿಶೇಷ ನ್ಯಾಯಾಲಯ ಆರಂಭಕ್ಕೆ ಆದೇಶ

Gangavathi Lawyers Celebration
ಗಂಗಾವತಿ ಜಿಲ್ಲಾ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯವನ್ನು ಜಿಲ್ಲಾ ವಿಶೇಷ ನ್ಯಾಯಾಲಯ ಎಂದು ಮೇಲ್ದರ್ಜೆಗೇರಿಸಿ ಹೈಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಜೆಎಂ್ಸಿ ನ್ಯಾಯಾಲಯದ ಮುಂದೆ ವಕೀಲರು ಸಂಭ್ರಮಿಸಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಪದಾಧಿಕಾರಿಗಳಾದ ನವಲಿ ಪ್ರಲ್ಹಾದರಾವ್, ಡಿ.ಎ.ಹಾಲಸಮುದ್ರ, ಸೌಭಾಗ್ಯಲಕ್ಷ್ಮೀ, ಅಕ್ಕಮಹಾದೇವಿ, ಎ.ಜೆ.ರಂಗನಾಥ ಇತರರಿದ್ದರು.
Published on

ಗಂಗಾವತಿ: ನಗರದಲ್ಲಿ ಜಿಲ್ಲಾ ವಿಶೇಷ ನ್ಯಾಯಾಲಯ ಸ್ಥಾಪನೆ ಬೇಡಿಕೆ ಈಡೇರಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಹೇಳಿದರು.

ನಗರದ ಜಿಲ್ಲಾ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯವನ್ನು ಜಿಲ್ಲಾ ವಿಶೇಷ ನ್ಯಾಯಾಲಯ ಎಂದು ಮೇಲ್ದರ್ಜೆಗೇರಿಸಿದ ಹೈಕೋರ್ಟ್ ಆದೇಶ ಸ್ವಾಗತಿಸಿ ವಕೀಲರ ಸಂಘದ ಸದಸ್ಯರು ಜೆಎಂ್ಸಿ ನ್ಯಾಯಾಲಯದ ಮುಂದೆ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಂಗಳವಾರ ಮಾತನಾಡಿದರು. ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ವಿಶೇಷ ಪ್ರಕರಣಗಳ ಇತ್ಯರ್ಥಕ್ಕಾಗಿ ಜಿಲ್ಲಾ ವಿಶೇಷ ನ್ಯಾಯಾಲಯ ಮಂಜೂರು ಮಾಡುವಂತೆ ಪತ್ರ ವ್ಯವಹಾರ ನಡೆಸಿದ್ದು, 2019ರಲ್ಲಿ ಜಿಲ್ಲಾ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಕಾರ್ಯಾರಂಭವಾಗಿತ್ತು. ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳಿರುವುದರಿಂದ ವಿಶೇಷ ನ್ಯಾಯಾಲಯ ಮಂಜೂರಿಗೆ ಮತ್ತೆ ಹೋರಾಟ ನಡೆಸಲಾಗಿತ್ತು. ಸಮಗ್ರ ಮಾಹಿತಿ ಪಡೆದುಕೊಂಡ ಹೈಕೋರ್ಟ್, ವಿಶೇಷ ನ್ಯಾಯಾಲಯಕ್ಕೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ ಎಂದರು.

ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿ, ವಿಶೇಷ ನ್ಯಾಯಾಲಯ ಮಂಜೂರಾದ ಹಿನ್ನೆಲೆಯಲ್ಲಿ ವಕೀಲರು ಮತ್ತು ಕಕ್ಷಿದಾರರಿಗೆ ಅನುಕೂಲವಾಗಿದೆ. 1100ಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗಬೇಕಿದ್ದು, ವಿಶೇಷ ನ್ಯಾಯಾಲಯದಿಂದ ತ್ವರಿತಗತಿಯಲ್ಲಿ ವಿಲೇವಾರಿಯಾಗುವ ವಿಶ್ವಾಸವಿದೆ ಎಂದರು.

ವಕೀಲರು ಕೋರ್ಟ್ ಆವರಣದಲ್ಲಿ ಸಿಹಿ ವಿತರಿಸಿ ಸಂಭ್ರಮಿಸಿದರು. ಸಂಘದ ಪದಾಧಿಕಾರಿಗಳಾದ ನವಲಿ ಪ್ರಲ್ಹಾದರಾವ್, ಡಿ.ಎ.ಹಾಲಸಮುದ್ರ, ಸೌಭಾಗ್ಯಲಕ್ಷ್ಮೀ, ಅಕ್ಕಮಹಾದೇವಿ, ಎ.ಜೆ.ರಂಗನಾಥ, ಎಸ್.ಎನ್.ನಾಯಕ, ಶರಣೇಗೌಡ ಮಾಲಿ ಪಾಟೀಲ್, ಶರದ್ ದಂಡಿನ್, ಎಚ್.ಸಿ.ಯಾದವ್, ಎಚ್.ಎಸ್.ಅಳವಂಡಿ, ಎಂ.ಪಂಪನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net