ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಇಬ್ಬರು ಆಯ್ಕೆ

Srinivas Kasbe, Savitri Mallanagouda Best Teachers
ಶ್ರೀನಿವಾಸ ಕಸ್ಬೆ, ಸಾವಿತ್ರಿ ಮಲ್ಲನಗೌಡ ಗೌಡರ್.
Published on

ಗಂಗಾವತಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡುವ ಪ್ರಸಕ್ತ ಸಾಲಿನ ಕಿರಿಯ ಪ್ರಾಥಮಿಕ ವಿಭಾಗದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನ ಗುಡ್ಡದಕ್ಯಾಂಪ್ ಸರ್ಕಾರಿ ಹಿಪ್ರಾ ಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ ಕಸ್ಬೆ ಆಯ್ಕೆಯಾಗಿದ್ದಾರೆ.

ಕನಕಗಿರಿಯ ಬೈಲಕ್ಕಂಪುರದಲ್ಲಿ ಶಿಕ್ಷಕ ವೃತ್ತಿ ಆರಂಬಿಸಿರುವ ಶ್ರೀನಿವಾಸ, ಗುಡ್ಡದ ಕ್ಯಾಂಪ್‌ನಲ್ಲಿ 2009ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಲಕರು ಮತ್ತು ದಾನಿಗಳ ನೆರವಿನೊಂದಿಗೆ ಶಾಲಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅದರಂತೆ

ಕಾರಟಗಿ ತಾಲೂಕು ಮರ‌್ಲಾನಹಳ್ಳಿ ಸರ್ಕಾರಿ ಹಿಪ್ರಾ ಶಾಲೆ ಮುಖ್ಯಶಿಕ್ಷಕಿ ಸಾವಿತ್ರಿ ಮಲ್ಲನಗೌಡ ಗೌಡರ್ ಕೂಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಮ್, ನೀರು ಶುದ್ಧೀಕರಣ ಘಟಕ ಸ್ಥಾಪನೆ, ಪೋಷಕಾಂಶಯುಕ್ತ ಗಾರ್ಡನ್ ನಿರ್ಮಾಣ ಸೇರಿ ಶಾಲಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net