ಅಂಗವಿಕಲರಿಗೆ ವಸತಿ ಸೌಲಭ್ಯ ಒದಗಿಸಿ: ಶಾಸಕ ಪರಣ್ಣ ಮುನವಳ್ಳಿಗೆ ಮನವಿ

12092022 gangavathi handicapt manavi
Published on


ಗಂಗಾವತಿ: ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಸದಸ್ಯರು ನಗರದ ಬಿಜೆಪಿ ಕಚೇರಿ ಬಳಿ ಶಾಸಕ ಪರಣ್ಣ ಮುನವಳ್ಳಿಗೆ ಭಾನುವಾರ ಮನವಿ ಸಲ್ಲಿಸಿದರು.

ಒಕ್ಕೂಟದ ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟಿ ಮಾತನಾಡಿ, ತಾಲೂಕಿನಲ್ಲಿ 1100ಕ್ಕೂ ಹೆಚ್ಚು ವಿವಿಧ ನ್ಯೂನತೆಯುಳ್ಳ ಅಂಗವಿಕಲರಿದ್ದು, ಬಹುತೇಕರಿಗೆ ಸ್ವಂತ ಸೂರಿಲ್ಲ. ನಗರಸಭೆ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಅಂಗವಿಕಲರಿಗಾಗಿ ಮೀಸಲು ನಿಗದಿಪಡಿಸುವಂತೆ ಸರ್ಕಾರದ ಅದೇಶವಿದ್ದರೂ ಈವರೆಗೆ ಮಂಜೂರಾಗಿಲ್ಲ. ದುಡಿಯಲು ಅಶಕ್ತರಾಗಿರುವ ಅಂಗವಿಕಲರಿಗೆ ಮನೆಗಳೊಂದಿಗೆ ಪ್ರತ್ಯೇಕ ಕಾಲನಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಯುವರಾಜ್, ರಾಜೇಶ, ನಾಗಪ್ಪ, ಉಮೇಶ ಕಲ್ಮನಿ, ಖಾದರ್‌ಪಾಷಾ, ಮಂಜುನಾಥ ಹೊಸ್ಕೇರಾ, ವಿನಯಕುಮಾರ, ಶರಣಪ್ಪ ಆರಾಳ್, ಯಲ್ಲಪ್ಪ, ಶೇಕ್ಷಾವಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net