

ಗಂಗಾವತಿ: ತಾಲೂಕಿನ ಢಣಾಪುರದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಹಾರ, ಮಾಜಿ ಉಪಪ್ರಧಾನಿ ಬಾಬೂ ಜಗಜೀವನರಾಮ್ ಜಯಂತ್ಯುತ್ಸವ ಶುಕ್ರವಾರ ಆಚರಿಸಲಾಯಿತು.
ವೃತ್ತದ ನಾಮಲಕಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹೋಬಳಿ ಘಟಕದ ಅಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಅಂಬೇಡ್ಕರ್ ದೂರದೃಷ್ಟಿ ಆಡಳಿತ ಲದಿಂದ ದಲಿತ ಸಮುದಾಯ ಉನ್ನತ ಅಧಿಕಾರ ಮತ್ತು ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ. ಕೃಷಿ ಕ್ಷೇತ್ರದ ಉನ್ನತಿಗೆ ಶ್ರಮಿಸಿದ ಬಾಬೂ ಜಗಜೀವನರಾಮ್ ಶ್ರೇಷ್ಟ ನಾಯಕರು ಎಂದರು.
ವಿವಿಧ ಸಮಾಜದ ಮುಖಂಡರಾದ ನಿಂಗಪ್ಪ ಗುಡ್ಲೇನೂರ, ಗುಡ್ಡಿ ಹನುಮಂತ, ಗುಡ್ಡಿ ರಾಮಣ್ಣ, ಹುಲುಗಪ್ಪ, ಶಿವರಾಜ್, ಮಲ್ಲೇಶ್ ಗುಲ್ಬರ್ಗ, ದೊಡ್ಡ ವಿರುಪಣ್ಣ, ದುರುಗಪ್ಪ ಹೆರಿಜೋಡು, ಮಾರುತಿ, ಮರಿಸ್ವಾಮಿ, ಹನುಮೇಶ ಇತರರಿದ್ದರು.