ಗಂಗಾವತಿ-ದರೋಜಿ ಮಾರ್ಗಕ್ಕೆ ಬೇಕು ಅನುದಾನ

25 KMP 01
ಕಂಪ್ಲಿ ಹೊರವಲಯದಲ್ಲಿ ಹಾದು ಹೋದ ರೈಲು ಮಾರ್ಗ ಸಮೀಕ್ಷೆಗಾಗಿ ಹಾಕಿದ ಗುರುತು.
Published on

ಕಂಪ್ಲಿ: ರಾಜ್ಯ,ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ, ಕಂಪ್ಲಿ ಮಾರ್ಗವಾಗಿ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗಕ್ಕಾಗಿ ಅನುದಾನ ಮೀಸಲಿರಿಸಬೇಕಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕ, ಜನಪ್ರತಿನಿಧಿಗಳು ರಾಜ್ಯ, ಕೇಂದ್ರ ಸರ್ಕಾರಗಳ ಗಮನ ಸೆಳೆಯಬೇಕಿದೆ.

ಈಗಾಗಲೇ ಕಂಪ್ಲಿ ಮಾರ್ಗವಾಗಿ ಗಂಗಾವತಿ-ದರೋಜಿ ರೈಲು ಮಾರ್ಗಕ್ಕಾಗಿ ಸಮೀಕ್ಷೆ ನಡೆಸಿ 31.30ಕಿ.ಮೀ.ರೈಲ್ವೆ ಮಾರ್ಗಕ್ಕೆ 919.49ಕೋಟಿ ರೂ. ಗೊತ್ತುಪಡಿಸಿದೆ. ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಭರಿಸಬೇಕಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಸ್ತುತ ಮಂಡಿಸಲಿರುವ ಬಜೆಟ್‌ನಲ್ಲಿ ಹಣ ಮೀಸಲಿರಿಸಬೇಕಿದೆ.

ಗಂಗಾವತಿ-ದರೋಜಿ ರೈಲು ಸಂಪರ್ಕದಿಂದ ಜಿಲ್ಲಾ ಕೇಂದ್ರ ಬಳ್ಳಾರಿಗೆ ಸಾರಿಗೆ ಸಂಪರ್ಕ ಸೌಲಭ್ಯ ದೊರಕಲಿದೆ. ಭತ್ತ ಸಾಗಣೆ, ರಸಗೊಬ್ಬರ, ಕ್ರಿಮಿನಾಶಕ, ಸಿಮೆಂಟ್, ಕಬ್ಬಿಣ, ಆಟೋಮೊಬೈಲ್ಸ್ ಬಿಡಿ ಭಾಗಗಳನ್ನು ತರಿಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ, ಗಂಗಾವತಿ, ಕಂಪ್ಲಿಯಿಂದ ನೇರವಾಗಿ ಬಳ್ಳಾರಿ, ಗುಂತಕಲ್, ಗುಂಟೂರುಗಳಿಗೆ ನೇರ ಸಂಪರ್ಕ ದೊರಕಲಿದೆ.

ಗಂಗಾವತಿಯಿಂದ ಬಳ್ಳಾರಿಗೆ ಸುತ್ತುಹಾಕಿ ಹೋಗುವುದು ತಪ್ಪಿ ನೇರ ಮಾರ್ಗ ದೊರಕಲಿದೆ. ಕಂಪ್ಲಿ ಮೂಲಕ ಗಂಗಾವತಿ-ದರೋಜಿ ರೈಲು ಮಾರ್ಗ ಅಗತ್ಯವಿದ್ದು ಕೂಡಲೇ ರಾಜ್ಯ, ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸಿ ಕಾರ್ಯಾರಂಭಗೊಳಿಸಬೇಕಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಸೇರಿ ಸಂಬಂಧಿಸಿದ ಎಲ್ಲಾ ಸಚಿವರು, ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದು ರಾಜ್ಯ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಾಜಿ ನಿರ್ದೇಶಕ ಅಶೋಕಸ್ವಾಮಿ ಹೇರೂರು ತಿಳಿಸಿದ್ದಾರೆ.

ಗಂಗಾವತಿ-ದರೋಜಿ ರೈಲು ಮಾರ್ಗಕ್ಕಾಗಿ ಅನುದಾನ ಬಿಡುಗಡೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೇರಿ ಸಂಬಂಧಿಸಿದ ಸಚಿವರು, ಜನಪ್ರತಿನಿಧಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ರೈಲು ಸಂಪರ್ಕ ಒದಗಿಸಲು ಮುಂದಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಹಣ ಮೀಸಲಿರಿಸಿ ಕಾಮಗಾರಿ ಆರಂಭಕ್ಕೆ ಅನುಮತಿಸಬೇಕಿದೆ. ಕೆ.ಎಂ.ಹೇಮಯ್ಯಸ್ವಾಮಿ ಅಧ್ಯಕ್ಷ, ರೈಲುಮಾರ್ಗಕ್ಕಾಗಿ ಕ್ರಿಯಾ ಸಮಿತಿ, ಕಂಪ್ಲಿ. ಗಂಗಾವತಿ-ದರೋಜಿ ರೈಲು ಸಂಪರ್ಕಕ್ಕಾಗಿ ಹಣ ಬಿಡುಗಡೆಗೆ ಮುಖ್ಯಮಂತ್ರಿಗಳನ್ನು, ಕೇಂದ್ರ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದು, ಮತ್ತೊಮ್ಮೆ ಅವರ ಗಮನಕ್ಕೆ ತರುತ್ತೇನೆ. ಜೆ.ಎನ್.ಗಣೇಶ್, ಶಾಸಕ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net