ಕ್ಷುಲಕ ಕಾರಣಕ್ಕಾಗಿ ಮಚ್ಚು ಹಿಡಿದು ದಾಂಧಲೆ

Untitled design-2
Published on

ಗಂಗಾವತಿ: ನಗರದ ಭಗೀರಥ ವೃತ್ತದ ಬಳಿ ಕ್ಷುಲಕ ಕಾರಣಕ್ಕಾಗಿ ಯುವಕನೊಬ್ಬ ಮಚ್ಚು ಹಿಡಿದು ಶನಿವಾರ ದಾಂಧಲೆ ನಡೆಸಿದ್ದು, ಒಬ್ಬನಿಗೆ ತೀವ್ರ ಗಾಯವಾಗಿದೆ.

ಘಟನೆಯಲ್ಲಿ ಛಲುವಾದಿ ಓಣಿಯ ಮಂಜು ಎಂಬಾತನಿಗೆ ಮಚ್ಚಿನೇಟು ಬಿದ್ದಿದ್ದು, ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕ್ಷುಲಕ ಕಾರಣಕ್ಕಾಗಿ ಎರಡು ಗುಂಪಿನ ನಡುವೆ ಜಗಳ ನಡೆದಿದ್ದು, ಕುಪಿತಗೊಂಡ ಯುವಕ ಎಳನೀರು ಮಚ್ಚಿನಿಂದ ದಾಂಧಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದವರು ತಡೆದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸುದ್ದಿ ಹರಡುತ್ತಿದ್ದಂತೆ ಸಾರ್ವಜನಿಕರು ಜಮಾಯಿಸಿದ್ದು, ಸ್ಥಳದಲ್ಲಿ ಕೆಲಕಾಲ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ನಗರ ಪಿಐ ಪ್ರಕಾಶ ಮಾಳೆ ನೇತೃತ್ವದ ಪೊಲೀಸರು ಆಗಮಿಸಿ ವಾತಾವರಣ ತಿಳಿಗೊಳಿಸಿದರು. ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಂಧಲೆ ನಡೆಸಿದ ಯುವಕರ ಚಹರೆ ಗೊತ್ತಾಗಿದ್ದು,ಬಂಧನಕ್ಕೆ ಬಲೆ ಬೀಸಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net