ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬನ್ನಿ; ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಕಿವಿಮಾತು

06122022 gangavathi Dr B R Ambedkar Mahaparinirvana
Published on

ಗಂಗಾವತಿ: ಮಹಾಪರಿನಿರ್ವಾಣ ನಿಮಿತ್ತ ನಗರದ 32ನೇ ವಾರ್ಡ್ ಹರಿಜನವಾಡಾದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಬಿಜೆಪಿ ಮುಖಂಡರು ಪುಷ್ಪಾರ್ಪನೆ ಮೂಲಕ ಮಂಗಳವಾರ ನಮನ ಸಲ್ಲಿಸಿದರು.

ccನೇತೃತ್ವದಲ್ಲಿ ಮೂರ್ತಿಗೆ ನಮನ ಸಲ್ಲಿಸಿದ ಗಣ್ಯರು, ಸಂವಿಧಾನದ ಮೂಲಕ ಸಮಾನತೆ ತತ್ವವನ್ನು ನೀಡಿದ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಆದರ್ಶ. ಮಹಾನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದ್ದು, ಶಿಕ್ಷಣದ ಮೂಲಕ ಅಭಿವೃದ್ಧಿ ಮುಖ್ಯವಾಹಿನಿಗೆ ಬರುವಂತೆ ಸಲಹೆ ನೀಡಿದರು. ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ಮುಖಂಡರಾದ ಬಸವರಾಜ, ಲಲಿತಮ್ಮ ಇತರರಿದ್ದರು.

ಮ್ಯಾರಥಾನ್ ಓಟ: ಪರಿನಿರ್ವಾಣ ನಿಮಿತ್ತ ಅಂಬೇಡ್ಕರ್ ಸಂದೇಶ ಜಾಗೃತಿಗಾಗಿ ಯುವಕರದಿಂದ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಕಂಪ್ಲಿಯಿಂದ ಗಂಗಾವತಿಯವರೆಗೂ ಜರುಗಿದ ಮ್ಯಾರಥಾನ್‌ನಲ್ಲಿ ಐವರು ಕ್ರೀಡಾಪಟುಗಳು ಭಾಗವಹಿಸಿದ್ದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಯುವಕರನ್ನು ಸ್ವಾಗತಿಸಿದ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಮಾತನಾಡಿ, ಅಂಬೇಡ್ಕರ್ ತತ್ವದಾರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉನ್ನತ ಹುದ್ದೆ ಪಡೆಯುವಂತೆ ಸಲಹೆ ನೀಡಿದರು. ಎಪಿಎಂಸಿ ಮಾಜಿ ಸದಸ್ಯ ಕೆ.ಅಂಬಣ್ಣ, ಕ್ರೀಡಾಪಟುಗಳಾದ ಕುಮಾರ, ಸುನೀಲ್‌ಕುಮಾರ, ಅನಿಲಕುಮಾರ, ಸುದೀಪ್, ಸಿದ್ದು, ಹರೀಶ್, ಮಹೆಬೂಬ್ ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net