

ಗಂಗಾವತಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಮತ ಕಳವು ಅಭಿಯಾನದಡಿ ವಾಹನಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರು ಮತ ಕಳವು ಭಿತ್ತಿಪತ್ರದೊಂದಿಗೆ ಪ್ರತಿಭಟಿಸಿದರಲ್ಲದೇ, ಕೆಕೆಆರ್‌ಟಿಸಿ ಸೇರಿ ಎಲ್ಲ ವಾಹನಗಳಿಗೆ ಪೋಸ್ಟರ್ ಅಂಟಿಸಿದರು.
ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಮತ್ತು ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾ.ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣೆ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದು, ಮತ ಕಳವು ಮೂಲಕ ಅಧಿಕಾರಕ್ಕೆ ಬಂದಿದೆ. ಇತ್ತೀಚಿಗೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಿಂದ ಮತ ಕಳವು ಪ್ರಕರಣ ಹೊರಬಂದಿದ್ದು, ಕಾಂಗ್ರೆಸ್ ಪಕ್ಷ ಹೋರಾಟ ತೀವ್ರ ಗೊಳಿಸಲಿದೆ ಎಂದರು.
ನಯೋಪ್ರಾ ಅಧ್ಯಕ್ಷ ಸೈಯದ್ ಇಲಿಯಾಸ್‌ಬಾಬಾ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಲಿಂಗೇಶ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜೋಗದ ರವಿನಾಯಕ, ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್, ವಿವಿಧ ಘಟಕದ ಪದಾಧಿಕಾರಿಗಳಾದ ಕಮ್ಲಿಬಾಬಾ, ಬಾಬರ್, ಸನ್ನಿಕ್, ಆನಂದ ಹಾಸಲ್ಕರ್, ಗವಿಸಿದ್ದಯ್ಯ, ಸಾಜೀದ್, ಅಯೂಬ್‌ಅಲಿ, ಅಸ್ೀ ಅಹ್ಮದ್, ರಾಚಪ್ಪ ಗುಂಜಳ್ಳಿ, ಈ.ಮಾರೇಶ, ಹುಸೇನ್ ಪೀರಾ ಜವಳಗೇರಾ, ಹನ್ೀ, ಅಬ್ಬಾಸ್, ಮುಕ್ತಿಯಾರ್ ಇತರರಿದ್ದರು.