ಸಮುದಾಯದ ಆರೋಗ್ಯ ಕಾಳಜಿಗೆ ಆದ್ಯತೆ

081122 Gangavati inauguration program of the office bearers of the Indian Medical Association
ಗಂಗಾವತಿ ಐಎಂಎ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಐಎಂಎ ಮತ್ತು ಮೈತ್ರಿ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
Published on

ಗಂಗಾವತಿ: ಸಮುದಾಯದ ಆರೋಗ್ಯ ಕಾಳಜಿ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಾಲೂಕು ಘಟಕದ ಅಧ್ಯಕ್ಷ ಡಾ.ಕೆ.ಎನ್. ಮಧುಸೂಧನ್ ತಿಳಿಸಿದರು.

ನಗರದ ಐಎಂಎ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಸೋಮವಾರ ಆಯೋಜಿಸಿದ್ದ 2022-23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಸಂಘ ಕ್ರೀಯಾಶೀಲವಾಗಿದ್ದು, ಆರೋಗ್ಯ ತಪಾಸಣೆ, ಚಿಕಿತ್ಸೆ ಜತೆಗೆ ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಂಘಟನೆ ಪದಾಧಿಕಾರಿಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ವಿಸ್ತರಿಸುವ ಯೋಜನೆಯಿದ್ದು, ಜನಸ್ನೇಹಿಯಾಗಿ ಕಾರ್ಯ ಮಾಡಲಿದೆ ಎಂದರು.

ಪದಾಧಿಕಾರಿಗಳ ಆಯ್ಕೆ: ಐಎಂಎ ಘಟಕಕ್ಕೆ ಡಾ.ಕೆ.ಎನ್. ಮಧುಸೂಧನ್ (ಅಧ್ಯಕ್ಷ), ಡಾ.ಜಿ.ಪಿ. ಮಹಾಂತೇಶ (ಕಾರ್ಯದರ್ಶಿ), ಡಾ.ವಿನಯ್ ಗುಂಜಳ್ಳಿ (ಖಜಾಂಚಿ), ಡಾ.ಅಮರೇಶ ಅರಳಿ (ಜಂಟಿ ಕಾರ್ಯದರ್ಶಿ), ಮೈತ್ರಿ ಮಹಿಳಾ ಘಟಕಕ್ಕೆ ಡಾ. ಸುಲೋಚನಾ ಚಿನಿವಾಲರ್ (ಅಧ್ಯಕ್ಷೆ), ಡಾ.ಎಸ್.ಜಿ. ಅನಿತಾ (ಕಾರ್ಯದರ್ಶಿ), ಡಾ.ಸುಲೋಚನಾ ವೆಂಕಟೇಶ (ಖಜಾಂಚಿ), ಡಾ.ಮಂಜುಳಾ ಶೆಳ್ಳಗಿ(ಜಂಟಿ ಕಾರ್ಯದರ್ಶಿ) ಆಗಿ ಆಯ್ಕೆ ಮಾಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಐಎಂಎ ರಾಜ್ಯಾಧ್ಯಕ್ಷ ಎಸ್.ಬಿ.ಲಕ್ಕೋಳ್, ಹಿರಿಯ ವೈದ್ಯರಾದ ಡಾ.ವಿ.ವಿ.ಚಿನಿವಾಲರ್, ಡಾ.ಜಂಬುನಾಥಗೌಡ, ಹಾಲಿ ಮತ್ತು ನಿರ್ಗಮಿತ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net