ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಯೋಜನೆ

Gangavathi mp cm visit meeting
ಕೊಪ್ಪಳದಲ್ಲಿನ ಸಿಎಂ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗಂಗಾವತಿ ಅನ್ಸಾರಿ ಸಭಾಂಗಣದಲ್ಲಿ ಕಾಂಗ್ರೆಸ್ ವಿವಿಧ ಘಟಕಗಳಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಸದ ಕೆ.ರಾಜಶೇಖರ್ ಹಿಟ್ನಾಳರನ್ನು ಶನಿವಾರ ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ,ಮುಜರಾಯಿ ಇಲಾಖೆ ನಾಮನಿರ್ದೇಶಿತ ಸದಸ್ಯ ವಿಶ್ವನಾಥ ಮಾ.ಪಾಟೀಲ್ ಇತರರಿದ್ದರು.
Published on

ಗಂಗಾವತಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಹಲವು ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅ.6 ರಂದು ಚಾಲನೆ ನೀಡಲಿದ್ದಾರೆ ಎಂದು ಸಂಸದ ಕೆ.ರಾಜಶೇಖರ್ ಹಿಟ್ನಾಳ ಹೇಳಿದರು.

ಕೊಪ್ಪಳದಲ್ಲಿ ಸಿಎಂ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಅನ್ಸಾರಿ ಸಭಾಂಗಣದಲ್ಲಿ ಕಾಂಗ್ರೆಸ್ ವಿವಿಧ ಘಟಕಗಳಿಂದ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 2000 ಕೋಟಿ ರೂ.ಗೂ ಹೆಚ್ಚಿನ ಕಾಮಗಾರಿಗೆ ಸಿಎಂ ಚಾಲನೆ ನೀಡಲಿದ್ದು, ಗ್ಯಾರಂಟಿ ಯೋಜನೆ ಲಾನುಭವಿಗಳ ಸಮಾವೇಶ ನಡೆಯಲಿದೆ. ಪಂಚ ಗ್ಯಾರಂಟಿಗಳು ರಾಜ್ಯದ ಜನರಿಗೆ ವರದಾನವಾಗಿದ್ದು, ಕುಟುಂಬಗಳ ನೆಮ್ಮದಿ ಬದುಕಿಗೆ ಕಾರಣವಾಗಿವೆ. ಸಮಾವೇಶ ಯಶಸ್ಸಿಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕಿದ್ದು, ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಸಭೆಯಲ್ಲಿ ಸಮಾವೇಶಕ್ಕೆ ಲಾನುಭವಿಗಳ ಕರೆದೊಯ್ಯುವುದು, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಸೇರಿ ವಿವಿಧ ವಿಷಯ ಕುರಿತು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

ನಯೋಪ್ರಾ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ನಗರಸಭೆ ಸದಸ್ಯರಾದ ಮನೋಹರಸ್ವಾಮಿ ಹಿರೇಮಠ, ಖಾಸೀಂಸಾಬ್ ಗದ್ವಾಲ್, ಮುಜರಾಯಿ ಇಲಾಖೆ ನಾಮನಿರ್ದೇಶಿತ ಸದಸ್ಯ ವಿಶ್ವನಾಥ ಮಾ. ಪಾಟೀಲ್, ಗ್ರಾಪಂ ಸದಸ್ಯ ಬಳ್ಳಾರಿ ರಾಮಣ್ಣನಾಯಕ, ಮುಖಂಡರಾದ ಯಮನಪ್ಪ ವಿಠಲಾಪುರ, ನೀಲಪ್ಪ ಸಣ್ಣಕ್ಕಿ, ಜುಬೇರ್ ಅಹ್ಮದ್, ಆನಂದ ಹಾಸಲ್ಕರ್, ಸನ್ನಿಕ್, ಹುಸೇನಪ್ಪ ಹಂಚಿನಾಳ್, ಅಯೂಬ್‌ಅಲಿ ಇತರರಿದ್ದರು.

ಪಕ್ಷದ ಇನ್ನೊಂದು ಗುಂಪಿನ ಸಭೆ ಪ್ರತ್ಯೇಕವಾಗಿ ಆಯೋಜನೆ

ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಇನ್ನೊಂದು ಗುಂಪಿನ ಸಭೆ ಪ್ರತ್ಯೇಕ ಆಯೋಜಿಸ ಲಾಗಿತ್ತು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮತ್ತು ಮಾಜಿ ಸಚಿವ ಎಂ.ಮ ಲ್ಲಿಕಾರ್ಜುನ ನಾಗಪ್ಪ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಿಎಂ ಕಾರ್ಯಕ್ರಮ ಯಶಸ್ಸಿನ ಕುರಿತು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಲಾನುಭವಿಗಳು ಮತ್ತು ಬೆಂಬಲಿಗರನ್ನು ಕರೆತರುವಂತೆ ಸಂಸದ ಕೆ.ರಾಜಶೇಖರ್ ಹಿಟ್ನಾಳ ಮನವಿ ಮಾಡಿದರು. ನಗರಸಭೆ ಸದಸ್ಯ ಶಾಮೀದ್ ಮನಿಯಾರ್, ಮುಖಂಡರಾದ ಮುಷ್ಟೂರು ರಾಜಶೇಖರ್, ಕೆ.ವೆಂಕಟೇಶ, ನಾಜನೀನ್, ಸುರೇಶ ಗೌರಪ್ಪ, ಅಸ್ೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net