ತ್ಯಾಜ್ಯ ಸಂಗ್ರಹ ಸ್ಥಳದಲ್ಲಿ ರಂಗೋಲಿ ಚಿತ್ತಾರ

cleanliness festival
ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಪಂನಿಂದ ಸ್ವಚ್ಛೋತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು. ಪಿಡಿಒ ನಾಗೇಶ ಕುರ್ಡಿ, ಆರೋಗ್ಯಾಧಿಕಾರಿ ಡಾ.ವೀರಾನಾಯ್ಕ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಪಂನಿಂದ ಸ್ವಚ್ಛೋತ್ಸವ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಸೆ.17ರಿಂದ ಅ.2ರವರೆಗೆ ಜಿಪಂನಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ವಚ್ಛತೆಯೇ ಸೇವೆ ಪರಿಕಲ್ಪನೆಯಡಿ ಸ್ವಚ್ಛೋತ್ಸವ ನಡೆಯಿತು.

ಪಿಡಿಒ ನಾಗೇಶ ಕುರ್ಡಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲಾ-ಕಾಲೇಜು, ಆಸ್ಪತ್ರೆ, ಅಂಗನವಾಡಿ ಕೇಂದ್ರ, ನೀರಿನ ಘಟಕ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಗುವುದು. ಸಾರ್ವಜನಿಕರು ಹಸಿ-ಒಣ ಕಸ ವಿಂಗಡಿಸಿ, ತ್ಯಾಜ್ಯವಿಲೇವಾರಿ ವಾಹನಕ್ಕೆ ಹಾಕುವಂತೆ ಮನವಿ ಮಾಡಿದರು.

ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ವೀರಾನಾಯ್ಕ, ನಿರೀಕ್ಷಣಾಧಿಕಾರಿ ಎಚ್.ಎಂ. ಗುರುರಾಜ್, ಪಂಚಾಯಿತಿ ಸಿಬ್ಬಂದಿ ಭಜಂತ್ರಿ ಮಂಜುನಾಥ್, ಮಹೇಶ್, ತಿಮ್ಮಪ್ಪ, ಪ್ರಸಾದ್, ಕಷ್ಣ, ರಾಘವೇಂದ್ರ, ಗುಲಾಬಿ, ಅನ್ನಪೂರ್ಣಾ ಇತರರಿದ್ದರು.

ಸಣಾಪುರ: ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯ ತ್ಯಾಜ್ಯ ಸಂಗ್ರಹ ಜಾಗದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ರಂಗೋಲಿ ಹಾಕುವ ಮೂಲಕ ಜಾಗೃತಿ ಮೂಡಿಸಲಾಯಿತು. ಸ.ಹಿ.ಪ್ರಾ. ಶಾಲೆ ಮುಖ್ಯಶಿಕ್ಷಕ ಸುಂಕಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ನರಸಿಂಹಲು ಸೇರಿ ಸ್ವಸಹಾಯ ಸಂಘದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net