

ಗಂಗಾವತಿ: ಪೌರ ಕಾರ್ಮಿಕರ ಹಿತರಕ್ಷಣೆಗೆ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದ್ದು, ಆರೋಗ್ಯ ರಕ್ಷಣೆಯತ್ತ ಗಮನಹರಿಸುವಂತೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.
ನಗರಸಭೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಯೋಜನೆ ಜಾರಿಗೊಳಿಸಲಾಗಿದೆ.
ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವ ಅವರಿಗೆ ಜನರ ಸಹಕಾರ ಮುಖ್ಯವಾಗಿದ್ದು, ತ್ಯಾಜ್ಯ ವಿಂಗಡಣೆಯಲ್ಲಿ ನೆರವಾಗುವಂತೆ ಸಲಹೆ ನೀಡಿದರು.
ನಗರಸಭೆ ಸದಸ್ಯ ಎಂ.ಡಿ.ಉಸ್ಮಾನ್ ಮಾತನಾಡಿ, ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಹೈ.ಕ.ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಗಡಪ್ಪ ಹುಲಿಹೈದರ್ ಮಾತನಾಡಿದರು.
ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್, ಸದಸ್ಯರಾದ ವಾಸುದೇವ ನವಲಿ, ಮನೋಹರಸ್ವಾಮಿ ಹಿರೇಮಠ, ಖಾಸಿಂಸಾಬ್ ಗದ್ವಾಲ್, ಮಾಜಿ ಸದಸ್ಯ ಸಿದ್ದಾಪುರ ರಾಚಪ್ಪ, ಪರಿಸರ ಇಂಜಿನಿಯರ್ ಚೇತನ ನಾಯ್ಕ , ಎಇ ಶಂಕರಗೌಡ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಮುಖ್ಯಲೆಕ್ಕಾಧಿಕಾರಿ ಮಂಜುನಾಥ, ವಿಷಯ ನಿರ್ವಾಹಕಿ ಕಾಂತಮ್ಮ, ಬಸವರಾಜ ಸುಳಕೋಡ್ ಇತರರಿದ್ದರು.