ಪೌಷ್ಟಿಕ ಆಹಾರ ಬಳಕೆಗೆ ಸಲಹೆ

PARISARA
ಗಂಗಾವತಿ ಸಿಬಿಎಸ್ ಕಾಲನಿ ಮಹಿಳಾ ಬಳಗದಿಂದ ಸೇವ್ ನೇಚರ್ ಪರಿಕಲ್ಪನೆಯಡಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಡಿ ಸ್ಟೀಲ್ ಪಾತ್ರೆಗಳ ಬಳಕೆ ಮತ್ತು ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಬಳಗದ ಮುಖ್ಯಸ್ಥೆ ಆವನಿ ಮೂಥಾ, ಪ್ರತಿನಿಧಿಗಳಾದ ರಜಿತಾ ಬೊಡ್ಡು, ವಿಜಯಶ್ರೀ ಕರಡಕಲ್ ಇತರರಿದ್ದರು.
Published on

ಗಂಗಾವತಿ: ನಗರದ ಸಿಬಿಎಸ್ ಕಾಲನಿಯ ಮಹಿಳಾ ಬಳಗದಿಂದ ಸೇವ್ ನೇಚರ್ ಪರಿಕಲ್ಪನೆಯಡಿ ಜಾಗೃತಿ ಅಭಿಯಾನ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಪ್ಲಾಸ್ಟಿಕ್ ಪ್ರೇರಿತ ವಸ್ತುಗಳಿಂದ ಪರಿಸರದ ಮೇಲಾಗುವ ಪರಿಣಾಮ ಕುರಿತು ಮಹಿಳೆಯರು ಕಾಲನಿಯಲ್ಲಿ ಜಾಗೃತಿ ಮೂಡಿಸಿದರಲ್ಲದೇ, ಪ್ಲಾಸ್ಟಿಕ್ ಬದಲಾಗಿ ಸ್ಟೀಲ್ ವಸ್ತುಗಳನ್ನು ಬಳಸುವ ಬಗ್ಗೆ ಮಾಹಿತಿ ನೀಡಿದರು. ಹೊಸ ವರ್ಷವನ್ನು ಪ್ಲಾಸ್ಟಿಕ್ ನಿಷೇಧ ವರ್ಷವನ್ನಾಗಿ ಆಚರಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಆರೋಗ್ಯಪೂರ್ಣ ಖಾದ್ಯಗಳ ಪ್ರದರ್ಶನದ ಮೂಲಕ ಪೌಷ್ಟಿಕ ಆಹಾರ ಬಳಸುವಂತೆ ಸಲಹೆ ನೀಡಲಾಯಿತು. ಬಳಗದ ಮುಖ್ಯಸ್ಥೆ ಆವನಿ ಮುಥಾ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಕೈಲಾದಷ್ಟು ಜಾಗೃತಿ ಮೂಡಿಸಲಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಯೂಸ್ ಆ್ಯಂಡ್ ಥ್ರೋ ವಸ್ತುಗಳ ಬಳಕೆ ನಿಲ್ಲಿಸಲಾಗಿದೆ ಎಂದರು.

ಬಳಗದ ಪ್ರತಿನಿಧಿಗಳಾದ ರಜಿತಾ ಬೊಡ್ಡು, ವಿಜಯಶ್ರೀ ಕರಡಕಲ್, ಶ್ರುತಿ, ಕಲ್ಪನಾ, ಸನುತಾ ನಾಗಮಲ್ಲಿ, ವರ್ಷಾ ಬ್ನಾ, ಖುಷಿಗೌಡ, ವನಜಾ ಬಾಗೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net