ಒಳ ಮೀಸಲಾತಿ ಜಾತಿ ಸಮೀಕ್ಷೆ ಶೇ.99 ಪೂರ್ಣ

Gangavathi cast servay meeting
ಗಂಗಾವತಿ ತಾಲೂಕಾಡಳಿತ ಸೌಧದಲ್ಲಿ ಎಸ್‌ಸಿ ಸಮಗ್ರ ಸಮೀಕ್ಷೆ ಕುರಿತು ಗಣತಿದಾರರ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಶನಿವಾರ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಸಂಗಪ್ಪ ಜೈನಾಪುರ, ಸಿಡಿಪಿಒ ಜಯಶ್ರೀ ರಾಜಪುರೋಹಿತ್ ಇತರರಿದ್ದರು.
Published on

ಗಂಗಾವತಿ: ಒಳ ಮೀಸಲಿಗಾಗಿ ಸರ್ಕಾರ ಕೈಗೊಂಡ ಸರ್ವೇ ಕಾರ್ಯವನ್ನು ಶೇ.100 ಪೂರ್ಣಗೊಳಿಸಬೇಕಿದ್ದು, ಸಮೀಕ್ಷೆಯಿಂದ ಹೊರಗುಳಿದವರನ್ನು ಪತ್ತೆ ಹಚ್ಚುವಂತೆ ಗಣತಿದಾರರಿಗೆ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಸಲಹೆ ನೀಡಿದರು.

ನಗರದ ತಾಲೂಕಾಡಳಿತ ಸೌಧದಲ್ಲಿ ಎಸ್‌ಸಿ ಸಮಗ್ರ ಸಮೀಕ್ಷೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ಗಣತಿದಾರರ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗ ಶಿಾರಸಿನಂತೆ ಎಸ್‌ಸಿ ಒಳ ಮೀಸಲು ವರ್ಗೀಕರಣಕ್ಕಾಗಿ ಗಣತಿ ಕಾರ್ಯ ಕೈಗೆತ್ತಿಕೊಂಡಿದ್ದು, ಈಗಾಗಲೇ ಪೂರ್ಣಗೊಂಡಿದೆ. ಗಣತಿಯಿಂದ ಹೊರಗುಳಿದ ಕುಟುಂಬಗಳನ್ನು ಪತ್ತೆ ಹಚ್ಚಬೇಕಿದ್ದು, ಆ್ಯಪ್ ಮೂಲಕ ಸ್ವಯಂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸಮೀಕ್ಷೆಯಿಂದ ಕುಟುಂಬಗಳು ಹೊರಗುಳಿಯಬಾರದು. ಎಸ್‌ಸಿ ಮುಖಂಡರ ಸಮನ್ವಯದೊಂದಿಗೆ ಗಣತಿ ಮೇಲ್ವಿಚಾರಕರು ಶೀಘ್ರವೇ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಸಂಗಪ್ಪ ಜೈನಾಪುರ ಮಾತನಾಡಿ, ಶೇ.99 ಗಣತಿ ಪೂರ್ಣಗೊಂಡಿದ್ದು, ಬಾಕಿ ಉಳಿದ ಶೇ.1 ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು. ಸಿಡಿಪಿಒ ಜಯಶ್ರೀ ರಾಜಪುರೋಹಿತ್, ಸಮನ್ವಯ ಶಿಕ್ಷಣಾಧಿಕಾರಿ ಮಂಜುನಾಥ ವಸದ್ ಸೇರಿ ಗಣತಿ ಮೇಲ್ವಿಚಾರಕರು ಮತ್ತು ದಲಿತ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net