ಉದ್ಯಾನದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸದಿರಿ

MANVI
ಗಂಡುಗಲಿ ಕುಮಾರರಾಮ ಸೇನೆ ಸದಸ್ಯರು ಗಂಗಾವತಿಯ ಉಪತಹಸೀಲ್ದಾರ್ ನರ್ಮದಾಗೆ ಶುಕ್ರವಾರ ಮನವಿ ಸಲ್ಲಿಸಿದರು. ಸೇನೆಯ ಅಧ್ಯಕ್ಷ ಎಚ್.ರಾಜೇಶ ನಾಯಕ ದೊರೆ, ವಿವಿಧ ಸಂಘಟನೆ ಸದಸ್ಯರಾದ ಪ್ರಮೋದ, ಲಕ್ಷ್ಮೀ, ರಮೇಶ, ಹುಲಿಗೆಮ್ಮ ಇತರರಿದ್ದರು.
Published on

ಗಂಗಾವತಿ: ನಗರದ ಬಸ್ ನಿಲ್ದಾಣದ ಉದ್ಯಾನದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ಒತ್ತಾಯಿಸಿ ಗಂಡುಗಲಿ ಕುಮಾರರಾಮ ಸೇನೆ ಸದಸ್ಯರು ಉಪತಹಸೀಲ್ದಾರ್ ನರ್ಮದಾಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸೇನೆ ಅಧ್ಯಕ್ಷ ಎಚ್.ರಾಜೇಶ ನಾಯಕ ದೊರೆ ಮಾತನಾಡಿ, ಬಸವೇಶ್ವರ ವೃತ್ತ ಪ್ರತ್ಯೇಕವಾಗಿದ್ದು, ಆದರೆ ಬಸವೇಶ್ವರ ಮೂರ್ತಿ ಬಸ್ ನಿಲ್ದಾಣದ ಉದ್ಯಾನದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಸರಿಯಲ್ಲ.

ಇದರಿಂದ ಉದ್ಯಾನ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಬೇರೆಡೆ ಪ್ರತಿಷ್ಠಾಪನೆಗೆ ಗಮನಹರಿಸಬೇಕು. ಬಸ್ ನಿಲ್ದಾಣ ಬಳಿ ಕೃಷ್ಣದೇವರಾಯ ಪ್ರತಿಮೆ ಪ್ರತಿಷ್ಠಾಪನೆ ಹೊರತುಪಡಿಸಿ ಬೇರೆ ಪ್ರತಿಮೆಗಳಿಗೆ ಅವಕಾಶ ನೀಡಬಾರದು ಎಂಂದು ಒತ್ತಾಯಿಸಿದರು. ವಿವಿಧ ಸಂಘಟನೆ ಸದಸ್ಯರಾದ ಪ್ರಮೋದ, ಲಕ್ಷ್ಮೀ, ರಮೇಶ, ಹುಲಿಗೆಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net