ರಕ್ತದಾನಕ್ಕೆ ಯುವಜನತೆ ಮುಂದಾಗಲಿ: ಗಂಗಾವತಿ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಸಲಹೆ

29 gvt 01
Published on

ಗಂಗಾವತಿ: ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ರಕ್ತದಾನ ಪೂರಕವಾಗಿದ್ದು, ಯುವಜನತೆ ವೈದ್ಯರ ಸಲಹೆಯಂತೆ ರಕ್ತದಾನಕ್ಕೆ ಮುಂದಾಗಬೇಕೆಂದು ಇಲ್ಲಿನ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಹೇಳಿದರು.

ತ್ರಿವಳಿ ತಾಲೂಕಿನ ಗೃಹರಕ್ಷಕ ದಳದ 60ನೇ ವರ್ಷಾಚರಣೆ ನಿಮಿತ್ತ ನಗರದ ಬಾಲಕರ ಸರ್ಕಾರಿ ಪಪೂ ಕಾಲೇಜು ಮೈದಾನದ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಅಂಜನಾದ್ರಿ ರಕ್ತನಿಧಿ ಕೇಂದ್ರ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎಲ್ಲ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಠವಾಗಿದ್ದು, ಮತ್ತೊಂದು ಜೀವ ಉಳಿಸಬಹುದಾಗಿದೆ. ರಕ್ತದಾನದಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಹೆರಿಗೆ ಸಂದರ್ಭದಲ್ಲಿ ರಕ್ತದ ಅಗತ್ಯತೆ ಹೆಚ್ಚಿದ್ದು, ಕೊರತೆಯಾಗದಂತೆ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದರು. ನಗರ ಪಿಐ ಟಿ.ವೆಂಕಟಸ್ವಾಮಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ನೆರವಾಗುವ ಗೃಹರಕ್ಷಕ ಸಿಬ್ಬಂದಿ ಆರೋಗ್ಯದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

30ಕ್ಕೂ ಹೆಚ್ಚು ಸಿಬ್ಬಂದಿ ರಕ್ತದಾನ ಮಾಡಿದರು. ನಿವೃತ್ತ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಹೊಸದಾಗಿ ಸೇರಿದ ಸಿಬ್ಬಂದಿಗೆ ಸಮವಸ ವಿತರಿಸಲಾಯಿತು. ಉಪತಹಸೀಲ್ದಾರ್ ಮಂಜುನಾಥ ನಂದನ್, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ.ಜೆ.ಪಿ.ಗವಿಸಿದ್ದಪ್ಪ, ಘಟಕಾಧಿಕಾರಿ ಎಸ್.ಮೀರಾಸಾಬ್, ಜಿಲ್ಲಾ ಸಹಾಯಕ ಶಿವಶರಣಪ್ಪ ರಾತ್ರೀಕರ್, ಕರ್ನಾಟಕ ರಕ್ತದಾನಿ ಬಳಗದ ಸಂಚಾಲಕ ಅಬ್ದುಲ್ ವಾಹೀದ್, ಮುಖಂಡರಾದ ಅಶೋಕ ಬಡಿಗೇರ್, ತಿಮ್ಮಣ್ಣನಾಯಕ, ರಾಘವೇಂದ್ರರಾವ್, ಸಂಗಪ್ಪ ಹಿರೇಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net