ಭಾಜಪದಲ್ಲಿದೆ ಸಮಾನತೆಯ ತತ್ವ-ಸಿದ್ಧಾಂತ; ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

Gangavathi BJP protest
ಮಹಿಳಾ ಮೀಸಲು ಮಸೂದೆ ಮಂಡಿಸಿದ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸಿ ಬಿಜೆಪಿ ವಿವಿಧ ಮೋರ್ಚಾ ಕಾರ್ಯಕರ್ತರು ಗಂಗಾವತಿ ಗಾಂಧಿ ವೃತ್ತದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್ ಇತರರಿದ್ದರು.
Published on

ಗಂಗಾವತಿ: ಮಹಿಳಾ ಮೀಸಲು ಮಸೂದೆ ಮಂಡಿಸಿದ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸಿ ಬಿಜೆಪಿ ವಿವಿಧ ಮೋರ್ಚಾ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖಂಡರನ್ನು ಅಭಿನಂದಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲ ವರ್ಗದ ಹಿತ ಕಾಯುತ್ತಿದ್ದು, ಈ ಹಿಂದೆ ಮಂಡಿಸಿದ ತ್ರಿವಳಿ ತಲಾಕ್ ಸೇರಿ ಹಲವು ಜನಪರ ಮಸೂದೆಗಳನ್ನು ದೇಶವೇ ಒಪ್ಪಿಕೊಂಡಿತ್ತು.

ಮಹಿಳಾ ಮೀಸಲು ಮಸೂದೆ ಮಂಡನೆಗೆ ಐತಿಹಾಸಿಕ ಅನುಮೋದನೆ ದೊರೆತಿದ್ದು, ಮಹಿಳೆಯರನ್ನು ಸಮನಾಗಿ ಕಾಣುವ ತತ್ವ ಸಿದ್ಧಾಂತ ಬಿಜೆಪಿಯಲ್ಲಿದೆ. ರೈತರು, ಕುಶಲಕರ್ಮಿಗಳು ಮತ್ತು ಎಲ್ಲ ಕಾರ್ಮಿಕರಿಗೂ ಈಗಾಗಲೇ ವಿಶೇಷ ಯೋಜನೆ ಜಾರಿಗೆ ತಂದಿದ್ದು, ಮಹಿಳಾ ಮೀಸಲು ಮಸೂದೆಯಿಂದ ನಾರಿಶಕ್ತಿ ಹೆಚ್ಚಾಗಲಿದೆ ಎಂದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಮಹಿಳಾ ಮೀಸಲಿನಿಂದ ರಾಜಕೀಯ ಇತರ ಕ್ಷೇತ್ರದಲ್ಲೂ ಸೀಯರಿಗೆ ಪ್ರಾತಿನಿಧ್ಯ ದೊರೆಯಲಿದೆ ಎಂದರು.

ನಗರಸಭೆ ಸದಸ್ಯ ಸುಚೇತಾ ಸಿರಿಗೇರಿ, ನಯೋಪ್ರಾ ಮಾಜಿ ಅಧ್ಯಕ್ಷರಾದ ಮಹಾಲಿಂಗಪ್ಪ ಬನ್ನಿಕೊಪ್ಪ, ಮಲ್ಲೇಶ ಹೊಸ್ಮಲಿ, ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳಾದ ನರಸಿಂಗರಾವ್ ಕುಲ್ಕರ್ಣಿ, ಸಂತೋಷ ಕೆಲೋಜಿ, ಕೆ.ವೆಂಕಟೇಶ, ರಾಧಾ ಉಮೇಶ, ರಾಜೇಶ ಪಾಟೀಲ್, ಶ್ರೀನಿವಾಸ ಧೂಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net