

ಗಂಗಾವತಿ: ಬಿಜೆಪಿ ಆಡಳಿತಾವಧಿಯಲ್ಲಿ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ದೇವಾಲಯ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಅನುದಾನ ಹೆಚ್ಚು ಬಳಕೆಯಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ 24ನೇ ವಾರ್ಡ್‌ನ ಸುಣಗಾರ ಓಣಿಯ ಶ್ರೀ ಗಂಗಾಪರಮೇಶ್ವರಿ ದೇವಾಲಯದ ಕಾಂಪೌಂಡ್ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಾಮರಸ್ಯ ಮತ್ತು ನೆಮ್ಮದಿಗೆ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿದ್ದು, ಅನಾದಿ ಕಾಲದಿಂದಲೂ ದೇವಾಲಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಧಾರ್ಮಿಕ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದರು.
ದೇವಾಲಯದ ಅಭಿವೃದ್ಧಿಗೆ ವೈಯಕ್ತಿಕ 1 ಲಕ್ಷ ರೂ. ನೆರವು ೋಷಿಸಿದರು. ಇದೇ ಸಂದರ್ಭದಲ್ಲಿ ತಾಯಮ್ಮ ದೇವಾಲಯದ ಗೋಪುರ ನಿರ್ಮಾಣಕ್ಕೆ ಶಾಸಕರ ಅನುದಾನದಡಿ ಮಂಜೂರಾದ 3.5ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ನಗರಸಭೆ ಸದಸ್ಯರಾದ ಪರಶುರಾಂ ಮಡ್ಡೇರ್, ಮಾಜಿ ಸದಸ್ಯ ಬಿ.ನಾಗರಾಜ್, ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಈ.ಧನರಾಜ್, ಪದಾಧಿಕಾರಿಗಳಾದ ಹುಲುಗಪ್ಪ, ಮಲ್ಲಿಕಾರ್ಜುನ ಮುಕ್ಕಂದಿ, ಬಿ.ಕೆ.ಹೆಡಗಿಮುದ್ರಾ, ಹನುಮಂತಪ್ಪ ಮನಗೂಳಿ, ಮುಖಂಡರಾದ ಶಿವಕುಮಾರ ಅರಿಕೇರಿ, ವೆಂಕಟೇಶ, ಜಂಬಣ್ಣ, ಈರಣ್ಣ, ಹನುಮಂತಪ್ಪ ಮುಕ್ಕಂದಿ, ಕಾಶಿನಾಥ ಚಿತ್ರಗಾರ ಇತರರಿದ್ದರು.