ಕಾರ್ಯಕರ್ತರೊಂದಿಗೆ ಸಂಘಟನೆ ಕುರಿತು ಚರ್ಚೆ

BJP
ಗಂಗಾವತಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ನೂತನ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್‌ರನ್ನು ವಿವಿಧ ಮೋರ್ಚಾದಿಂದ ಸೋಮವಾರ ಸನ್ಮಾನಿಸಲಾಯಿತು. ಮಾಜಿ ಶಾಸಕ ಪರಣ್ಣಮುನವಳ್ಳಿ, ನಗರಸಭೆ ಸದಸ್ಯ ಉಮೇಶ ಸಿಂಗನಾಳ್, ವಾಸುದೇವ ನವಲಿ, ಮಾಜಿ ಅಧ್ಯಕ್ಷರಾದ ಎಸ್.ರಾಘವೇಂದ್ರ ಶ್ರೇಷ್ಠಿ ಇತರರಿದ್ದರು.
Published on

ಗಂಗಾವತಿ: ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ನವೀನ್ ಗುಳಗಣ್ಣನವರ್ ಮತ್ತು ಬೆಂಬಲಿಗರು ನಗರದ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ನೀಡಿ ಸ್ಥಳೀಯ ಕಾರ್ಯಕರ್ತರೊಂದಿಗೆ ಸಂಘಟನೆ ಕುರಿತು ಚರ್ಚಿಸಿದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಪರಣ್ಣಮುನವಳ್ಳಿ ಪೈಪೋಟಿಯಿದ್ದರೂ, ಯುವಕರಿಗೆ ಆದ್ಯತೆ ನೀಡಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ನವೀನ್ ಗುಳಗಣ್ಣನವರ್‌ಗೆ ದೊರೆತಿದೆ. ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಕ್ಷದ ಕಚೇರಿಗೆ ಭೇಟಿ ನೀಡಿದ ನವೀನ್, ಮಾಜಿ ಶಾಸಕ ಸೇರಿ ಇತರ ಮುಖಂಡರೊಂದಿಗೆ ಚರ್ಚಿಸಿದರು.

ಅಧ್ಯಕ್ಷ ಸ್ಥಾನ ಆಯ್ಕೆಗೆ ಪರಣ್ಣ ಸೇರಿ ಇತರರು ಸಹಕರಿಸಿದ್ದು, ಎಲ್ಲರೊಂದಿಗೆ ಕೂಡಿಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ವಿವಿಧ ಮೋರ್ಚಾದಿಂದ ನವೀನ್ ಗುಳಗಣ್ಣವರ್‌ರನ್ನು ಸನ್ಮಾನಿಸಲಾಯಿತು.

ನಗರಸಭೆ ಸದಸ್ಯ ಉಮೇಶ ಸಿಂಗನಾಳ್, ವಾಸುದೇವ ನವಲಿ, ಮಾಜಿ ಅಧ್ಯಕ್ಷರಾದ ಎಸ್.ರಾಘವೇಂದ್ರ ಶ್ರೇಷ್ಠಿ, ಜೋಗದ ಹನುಮಂತಪ್ಪ ನಾಯಕ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕಾಶೀನಾಥ ಚಿತ್ರಗಾರ, ಮುಖಂಡರಾದ ಟಿ.ಆರ್. ರಾಯಭಾಗಿ, ಸಂಗಯ್ಯಸ್ವಾಮಿ ಸಂಶಿಮಠ, ಡಾ.ಎ.ಜೀಡಿ, ವೀರೇಶ ಅಂಗಡಿ, ಸಿದ್ದಲಿಂಗಯ್ಯಸ್ವಾಮಿ ಗಡ್ಡಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net