

ಗಂಗಾವತಿ: ಕಾಂಗ್ರೆಸ್ ಪಕ್ಷದಿಂದ ಜನಹಿತ ಸಾಧ್ಯವಿದೆ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ವಿವಿಧ ಘಟಕದಿಂದ ಸೋಮವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಪುಣ್ಯತಿಥಿ ಮತ್ತು ಭಾರತ್ ಜೋಡೋ ಯಾತ್ರೆ ಸಮಾರೋಪದ ವಿಜಯೋತ್ಸವ ಆಚರಿಸಿ ಮಾತನಾಡಿದರು. ಸ್ವಾತಂತ್ರ್ಯದ ಹೋರಾಟ ಕಾಲದಿಂದಲೂ ಕಾಂಗ್ರೆಸ್ ಜನರಿಗಾಗಿ ದುಡಿದಿದ್ದು, ಬಡವರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸರ್ವ ಸಮುದಾಯವನ್ನು ಒಪ್ಪಿಕೊಂಡಿದೆ. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ರಾಹುಲ್ ಗಾಂಧಿ ಹಮ್ಮಿಕೊಂಡ ಪಾದಯಾತ್ರೆ ಅಭೂತಪೂರ್ವ ಯಶಸ್ವಿಯಾಗಿದ್ದು, ಜನರ ಮೆಚ್ಚುಗೆ ಪಡೆದಿದೆ ಎಂದರು.
ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡ ಯಾತ್ರೆಯಿಂದ ಜನರಿಗೆ ಬಿಜೆಪಿ ದುರಾಡಳಿತದ ಬಗ್ಗೆ ಮನವರಿಕೆಯಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ನಗರಸಭೆ ಸದಸ್ಯ ಎಂ.ಡಿ.ಉಸ್ಮಾನ್, ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ ನಾಯಕ, ಕೆಪಿಸಿಸಿ ವಕ್ತಾರೆ ಎಚ್.ಎಂ.ಶೈಲಜಾ, ವಿವಿಧ ಘಟಕದ ಪದಾಧಿಕಾರಿಗಳಾದ ರಮೇಶ ಗೌಳಿ, ಲಿಂಗಪ್ಪ ನಾಯಕ, ರಾಜಶೇಖರ್ ಮುಷ್ಟೂರು, ವೀರನಗೌಡ, ಸೈಯದ್ ನಾಜನೀನ್, ಸರ್ವೇಶ ಮಾಂತಗೊಂಡ, ಅಶೋಕ ನಾಯ್ಕಲ್, ಸುರೇಶ ಗೌರಪ್ಪ, ಅಯೂಬ್‌ಅಲಿ, ಬಸವರಾಜ ಐಲಿ ಇತರರಿದ್ದರು.