

ಗಂಗಾವತಿ: ತಾಲೂಕಿನ ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ೆಡರೇಷನ್ (ಎಐಎಸ್‌ಎ್) ತಾಲೂಕು ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಬಿಇಒ ವೆಂಕಟೇಶ ರಾಮಚಂದ್ರಪ್ಪಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಹುಲುಗಪ್ಪ ಹಣವಾಳ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳು ಹೆಚ್ಚುತ್ತಿದ್ದು, ಪರವಾನಗಿ ಪಡೆಯದೇ ನಡೆಸುತ್ತಿವೆ. ಕೆಲ ಶಾಲೆಗಳಲ್ಲಿ ಮನಬಂದಂತೆ ಶುಲ್ಕ ನಿಗದಿಪಡಸಿದ್ದು, ಡೊನೇಷನ್ ಹಾವಳಿ ಮಿತಿ ಮೀರಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಪಾಲಕರಿಗೆ ಹೊರೆಯಾಗುತ್ತಿದೆ.
ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸುವುದರ ಜತೆಗೆ ಪಾಲಕರ, ವಿದ್ಯಾರ್ಥಿ ಸಂಘಟನೆ ಮತ್ತು ಶಾಲಾಡಳಿತ ಮಂಡಳಿಯೊಂದಿಗೆ ಸಭೆ ಆಯೋಜಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ಗಾಯತ್ರಿ ಅಕ್ಕಿರೊಟ್ಟಿ, ಎಚ್.ಎಂ.ಹಿರೇಮಠ, ಎ.ಎಲ್.ತಿಮ್ಮಣ್ಣ, ಎ.ಹುಲುಗಪ್ಪ, ಪಾಲಕ ಪ್ರತಿನಿಧಿಗಳಾದ ಲಕ್ಷ್ಮಣನಾಯಕ, ಈರಮ್ಮ, ಮರಿಯಮ್ಮ, ಶೇಖಮ್ಮ, ನಾಗರಾಜಬದ್ರಿ, ಪರಶುರಾಮ್ ಇತರರಿದ್ದರು.