ಶಾಸಕ ಸ್ಥಾನದಿಂದ ಯತ್ನಾಳ್ ವಜಾ ಮಾಡಲಿ

PROTEST
ಶಾಸಕ ಬಸನಗೌಡ ಯಾತ್ನಾಳ್ ವಿರುದ್ಧ ಗಂಗಾವತಿಯಲ್ಲಿ ಬಸವ ದಳ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು. ಕಾರ್ಯದರ್ಶಿ ವೀರೇಶ ಬಸವರೆಡ್ಡಿ,ಗೌರವಾಧ್ಯಕ್ಷ ಎಚ್.ಮಲ್ಲಿಕಾರ್ಜುನ, ಅಧ್ಯಕ್ಷ ದಿಲೀಪ್‌ಕುಮಾರ ವಂದಾಲ್, ಪದಾಧಿಕಾರಿಗಳಾದ ಕೆ.ವೀರೇಶಪ್ಪ, ಪುರುಷೋತ್ತಮ, ರೇಣುಕಾ, ಚನ್ನಮ್ಮ ಇತರರಿದ್ದರು.
Published on

ಗಂಗಾವತಿ: ಬಸವಣ್ಣ ಅವರನ್ನು ಅವಹೇಳನ ಮಾಡಿದ ವಿಜಯಪುರ ಶಾಸಕ ಬಸನಗೌಡ ಯಾತ್ನಾಳ್ ವಿರುದ್ಧ ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ರಾಷ್ಟ್ರೀಯ ಬಸವ ದಳ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಕಾರ್ಯದರ್ಶಿ ವೀರೇಶ ಬಸವರೆಡ್ಡಿ ಮಾತನಾಡಿ, ಯಾತ್ನಾಳ್ ಅವರು ಹದ್ದು ಮೀರಿ ವರ್ತಿಸಿದ್ದು, ವಿಶ್ವಗುರು ಬಸವಣ್ಣ ಅವರನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆ ಸರಿಯಲ್ಲ. ಯಾತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಗೌರವಾಧ್ಯಕ್ಷ ಎಚ್.ಮಲ್ಲಿಕಾರ್ಜುನ, ಅಧ್ಯಕ್ಷ ದಿಲೀಪ್‌ಕುಮಾರ ವಂದಾಲ್, ಪದಾಧಿಕಾರಿಗಳಾದ ಕೆ.ವೀರೇಶಪ್ಪ, ಪುರುಷೋತ್ತಮ, ರೇಣುಕಾ, ಚನ್ನಮ್ಮ, ಎಚ್.ಶರಣಪ್ಪ, ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net