

ಗಂಗಾವತಿ : ದುಡಿಯುವ ವರ್ಗದ ಮೇಲಾಗುತ್ತಿರುವ ದೌರ್ಜನ್ಯ ಹತ್ತಿಕ್ಕಲು, ಎಲ್ಲ ವರ್ಗದವರೂ ಸಂಘಟಿತರಾಗಬೇಕಿದೆ ಎಂದು ಆಟೋ ಟೆಕ್ನಿಷಿಯನ್ಸ್ ವೆಲ್‌ೇರ್ ೆರಂ ಜಿಲ್ಲಾಧ್ಯಕ್ಷ ಡಿ.ವಿಜಯ್ ಹೇಳಿದರು.
ನಗರದ ಆಟೋನಗರದ ಕ್ರಾಂತಿ ಕೇಂದ್ರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಮೂಲ ನಿವಾಸಿ ಬಹುಜನ ರಕ್ಷಣಾ ವೇದಿಕೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ರಕ್ಷಣೆಗಾಗಿ ಸಂಸ್ಥೆ ಶ್ರಮಿಸುತ್ತಿದ್ದು, ದೌರ್ಜನ್ಯಗಳನ್ನು ತಡೆಯಲು ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಸಿಪಿಐ(ಎಂಎಲ್)ಲಿಬರೇಶನ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯ ಜೆ.ಭಾರದ್ವಾಜ್ ಮಾತನಾಡಿ, ಮನುವಾದದ ವಿರುದ್ಧ ಹೋರಾಟದ ಸಂಘಟನೆ ಅಗತ್ಯವಿದ್ದು, ಬಹುಜನರನ್ನು ರಕ್ಷಿಸಲಿದ್ದೇವೆ. ಗಂಗಾವತಿ ಕ್ಷೇತ್ರ ಶಾಂತಿಯುತವಾಗಿದ್ದು, ಸಣ್ಣ ಕ್ಷುಲ್ಲಕ ಜಗಳ ಹೊರತು ಜನರೆಲ್ಲರೂ ಶಾಂತವಾಗಿದ್ದಾರೆ. ಬಳ್ಳಾರಿ ಗಣಿ ಉದ್ಯಮಿಗಳ ಪ್ರವೇಶದಿಂದ ರಾಜಕೀಯ ಸಂಘರ್ಷ ಶುರುವಾಗಲಿದ್ದು, ಕ್ಷೇತ್ರದಲ್ಲಿರಲು ಅವಕಾಶ ನೀಡಲ್ಲ ಎಂದರು.